ಹನುಮಸಾಗರ | ನೂತನ ಪಿಎಸ್’ಐ ಧನಂಜಯ ಅಧಿಕಾರ ಸ್ವೀಕಾರ

ಸುದ್ದಿ ಸಮರ್ಪಣ |

ಕುಷ್ಟಗಿ : ಬಳ್ಳಾರಿ ವಲಯ ಐ.ಜಿ.ಪಿ. ಕಚೇರಿಯಿಂದ ವರ್ಗವಾಗಿ ತಾಲೂಕಿನ ಹನುಮಸಾಗರ ಠಾಣೆಗೆ ನಿಯುಕ್ತಿಗೊಂಡಿದ್ದ ಪಿಎಸ್’ಐ ಧನಂಜಯ ಹಿರೇಮಠ ಅವರು ಶನಿವಾರ ಠಾಣೆಗೆ ಹಾಜರಾಗಿ ಅಧಿಕಾರ ಸ್ವೀಕರಿಸಿದರು.

ಕಳೆದೊಂದು ವರ್ಷದಿಂದ ಹನುಮಸಾಗರ ಠಾಣೆಯಲ್ಲಿ ಸೇವೆಯಲ್ಲಿದ್ದ ಪಿಎಸ್’ಐ ವಿರುಪಾಕ್ಷಪ್ಪ ಅವರು ಬಳ್ಳಾರಿ ವಲಯ ಐ.ಜಿ.ಪಿ. ಕಚೇರಿಗೆ ವರ್ಗಾವಣೆಯಾದ ಹಿನ್ನೆಲೆ ಅವರ ಸ್ಥಾನವನ್ನು ಪಿಎಸ್’ಐ ಧನಂಜಯ ಅವರು ವಹಿಸಿಕೊಂಡರು. ಈ ವೇಳೆ ಸಿಪಿಐ ಯಶವಂತ ಬಿಸನಳ್ಳಿ, ಕ್ರೈಂ ಪಿಎಸ್’ಐ ಬಸ್ಸಪ್ಪ ಲಮಾಣಿ ಹಾಗೂ ಹನುಮಸಾಗರ ಠಾಣೆ ಪೊಲೀಸ್ ಸಿಬ್ಬಂದಿ ನೂತನ ಪಿಎಸ್’ಐ ಧನಂಜಯ ಹಿರೇಮಠ ಅವರನ್ನು ಸ್ವಾಗತಿಸಿ ವರ್ಗಾವಣೆಯಾದ ಪಿಎಸ್’ಐ ವಿರುಪಾಕ್ಷಪ್ಪ ಅವರನ್ನು ಬೀಳ್ಕೊಟ್ಟರು.