ಸಂಗಮೇಶ ಮುಶಿಗೇರಿ
ಸುದ್ದಿ ಸಮರ್ಪಣ |
ಕುಷ್ಟಗಿ : ಜೀವನ ಶೈಲಿಯನ್ನು ಸರಿಯಾಗಿಟ್ಟುಕೊಂಡರೆ ಅದುವೇ ಆರೋಗ್ಯದ ಬದಲಾವಣೆಯಾಗುತ್ತದೆ ಅದುವೇ ದಿವ್ಯೌಷಧ ಎಂದು ಪಟ್ಟಣದ ಸರ್ಕಾರಿ ಹೋಮೀಯೋಪಥಿ ಚಿಕಿತ್ಸಾಲಯದ ವೈದ್ಯೆ ಡಾ. ದೀಪಾ ಹುಲಸೂರು ರವರು ಹೇಳಿದರು.
ಅವರು ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ರಾಷ್ಟ್ರೀಯ ಸೇವಾಯೋಜನೆ ಘಟಕದ ವತಿಯಿಂದ ನಡೆದ ಉಚಿತ ಆಯುಷ್ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅಧಿಕಾರಿ ಡಾ. ನಾಗರಾಜ ಹೀರಾ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ವೈದ್ಯರ ಸಲಹೆ ಪಾಲಿಸಲು ವಿಧ್ಯಾರ್ಥಿಗಳು ಗಮನಹರಿಸಬೇಕು ಎಂದು ಹೇಳಿದರು. ಪ್ರಾಚಾರ್ಯ ಮಾಲಾ ಪಡಸಾಲಿಮನಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನಂತರ ವೈದ್ಯೆ ಡಾ.ದೀಪಾ ಅವರು ನೂರಾರು ವಿದ್ಯಾರ್ಥಿಗಳನ್ನು ವೈಯಕ್ತಿಕವಾಗಿ ತಪಾಸಣೆ ನಡೆಸಿ ಉಚಿತ ಔಷಧಿ, ಚಿಕಿತ್ಸೆ ನೀಡಿದರು.
ಈ ವೇಳೆ ಕಾಲೇಜಿನ ಉಪನ್ಯಾಸಕರು ಹಾಜರಿದ್ದರು. ಉಪನ್ಯಾಸಕರಾದ ಮಲ್ಲಿಕಾರ್ಜುನ ನೀರೂಪಣೆ ನೇರವೇರಿಸಿದರು. ದೊಡ್ಡಬಸವ ಕುರಿ ವಂದಿಸಿದರು.