ಸಂಗಮೇಶ ಮುಶಿಗೇರಿ
ಸುದ್ದಿ ಸಮರ್ಪಣ |
ಕುಷ್ಟಗಿ : 2024-25ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಸಂಜೀವಿನಿ-NRLM ಸಿಬ್ಬಂದಿ ಮೊಬೈಲ್ ಆಪ್ ಮೂಲಕ ತಾಲೂಕಿನ 36 ಗ್ರಾಮ ಪಂಚಾಯಿತಿಗಳ ವಾರು ಮನೆ-ಮನೆ OOSC ಸಮೀಕ್ಷೆ ಕಾರ್ಯ ಕೈಗೊಂಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ ಆದೇಶದನ್ವಯ ಬುಧವಾರ ತರಬೇತಿ ಹೊಂದಿರುವ ಸಂಜೀವಿನಿ ಒಕ್ಕೂಟದ MBK, LCRP ಸಿಬ್ಬಂದಿ, ಕೃಷಿ ಸಖಿ, ಪಶು ಸಖಿ, ಕೃಷಿ ಉದ್ಯೋಗ ಸಖಿಗಳು, FLCRP, ಬ್ಯಾಂಕ್ ಸಖಿ ಹಾಗೂ ಕ್ರಿಯಾಶೀಲ ಮಹಿಳೆಯರು ಮನೆ-ಮನೆ ಸರ್ವೇ ಕಾರ್ಯಕ್ಕೆ ಮುಂದಾಗಿದ್ದಾರೆ.
ತಾಲೂಕಿನ ಹನಮಸಾಗರ, ಚಳಗೇರಾ, ಅಡವಿಭಾವಿ, ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳ ಪ್ರತಿ ಮನೆಗಳಿಗೆ ಭೇಟಿ ನೀಡಿ ಮನೆಯ ಮುಖ್ಯಸ್ಥರ ಬಳಿ ಪಡಿತರ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ 6 ರಿಂದ 18 ವರ್ಷದ ಪ್ರತಿ ಮಗುವಿನ ಶಾಲಾ ದಾಖಲಾತಿ, ಹಾಜರಾತಿ ಮಾಹಿತಿ ಪಡೆದು ಮೊಬೈಲ್ ಯ್ಯಾಪಲ್ಲಿ ನೇರ ನೋಂದಾಯಿಸುತಿದ್ದಾರೆ. ಪ್ರತಿ ಮಗು 8 ವರ್ಷಗಳ ಶಾಲಾ ಶಿಕ್ಷಣವನ್ನು ಪಡೆಯುವುದು ಕಡ್ಡಾಯವಾಗಿದೆ ಎಂದು ಮಾಹಿತಿ ನೀಡುವ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಕಾರ್ಯ ಭರದಿಂದ ನಡೆಸುತಿದ್ದಾರೆ.
ಸರ್ವೆ ಕಾರ್ಯದಲ್ಲಿ ನಿರತರಾಗಿದ್ದ ಸಂಜೀವಿನಿ ಒಕ್ಕೂಟದ ಸಿಬ್ಬಂದಿಗೆ ಮೊಬೈಲ್ ಯ್ಯಾಪಲ್ಲಿ ತಾಂತ್ರಿಕ ತೊಂದರೆ ನಿವಾರಿಸಿ, ಸಲಹೆ, ಸೂಚನೆ ಹಾಗೂ ಮಾರ್ಗದರ್ಶನ ನೀಡಲಾಗುತ್ತಿದ್ದು, ತಾಲೂಕಿನಲ್ಲಿ ಈಗಾಗಲೇ 11,764 ಕುಟುಂಬಗಳನ್ನು ತಲುಪಿರುವ ಸರ್ವೇ, ನಿರಂತರವಾಗಿ ಮುಂದುವರೆದಿದೆ, ಸರ್ವೇ ಕಾರ್ಯದ ಉಸ್ತುವಾರಿಗಳಾಗಿ ಸಂಜೀವಿನಿ -NRLM ಯೋಜನೆಯ ಹನಮಸಾಗರ ಹೋಬಳಿ ಮೇಲ್ವಿಚಾರಕ ಮಾದೇಗೌಡ ಪೊಲೀಸ್ ಪಾಟೀಲ್, ಹನಮನಾಳ ಹೋಬಳಿ ಮೇಲ್ವಿಚಾರಕ ರಾಜು ಭಜಂತ್ರಿ, ತಾವರಗೇರಾ ಹೋಬಳಿ ಮೇಲ್ವಿಚಾರಕ ಸಂಗಣ್ಣ ಸಂಗಾಪೂರ್ ಕಾರ್ಯನಿರ್ವಹಿಸುತಿದ್ದಾರೆ.
– ಮಾದೇಗೌಡ ಪೊಲೀಸ್ ಪಾಟೀಲ್,
ಸಂಜೀವಿನಿ ಯೋಜನೆಯ ಮೇಲ್ವಿಚಾರಕ