ಕುಷ್ಟಗಿ | ವಕೀಲರ ಸಂಘಕ್ಕೆ ಅವಿರೋಧ ಆಯ್ಕೆ

ಸುದ್ದಿ ಸಮರ್ಪಣ |

ಕುಷ್ಟಗಿ : ವಕೀಲರ ಸಂಘದ ಚುನಾವಣೆಯ ನಾಮಪತ್ರ ವಾಪಾಸಾತಿ ಪ್ರಕ್ರಿಯೆ ಸೋಮವಾರ ಮುಗಿದಿದ್ದು, ಅಧ್ಯಕ್ಷ ಸ್ಥಾನ ಹೊರತುಪಡಿಸಿ ಉಳಿದ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ ಎಂದು ತಿಳಿದುಬಂದಿದೆ.

ಉಪಾಧ್ಯಕ್ಷ ಸ್ಥಾನಕ್ಕೆ ವಕೀಲ ರಾಜಶೇಖರ್ ವಿ. ಪಾಟೀಲ್, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ವಕೀಲ ಆನಂದ ಎಸ್. ಡೊಳ್ಳಿನ, ಜಂಟಿ ಕಾರ್ಯದರ್ಶಿಯಾಗಿ ಮಹಾಂತೇಶ್ ಎಲ್.ನಾರಕ, ಖಜಾಂಚಿಯಾಗಿ ನಾಗನಗೌಡ ಡಿ. ಪೊಲೀಸ್ ಪಾಟೀಲ್ ಹಾಗೂ ಮಹಿಳಾ ಪ್ರತಿನಿಧಿ ಸ್ಥಾನಕ್ಕೆ ವಕೀಲೆ ಲತಾ ಎಸ್. ಸ್ಥಾವರಮಠ ಅವರೊಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಘೋಷಿಸಿದ್ದಾರೆ ಎಂದು ವಕೀಲರ ಸಂಘದ ಮೂಲಗಳು ಸ್ಪಷ್ಟಪಡಿಸಿವೆ. ಉಳಿದಂತೆ ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ವಕೀಲರಾದ ಡಿ.ಎಸ್. ಪಾಟೀಲ್ ಹಾಗೂ ಎಸ್. ಜಿ.ಪಾಟೀಲ್ ಮಧ್ಯೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಇಬ್ಬರು ತಮಗೆ ಬೆಂಬಲಿಸಿ ಮತ ಚಲಾಯಿಸುವಂತೆ ಸಂಘದ ವಕೀಲ ಸದಸ್ಯರ ಬಳಿ ದುಂಬಾಲು ಬಿದ್ದಿದ್ದಾರೆ ಎಂಬುದು ಗೊತ್ತಾಗಿದೆ.

ಒಟ್ಟಾರೆ, ಅಂತಿಮವಾಗಿ ಈ ಇಬ್ಬರ ವಕೀಲರ ಸ್ಪರ್ಧೆಯಲ್ಲಿ ಯಾರು ಅಧ್ಯಕ್ಷ ಸ್ಜಾನದ ಗೆಲವಿನ ಹಾರ ಹಾಕಿಸಿಕೊಳ್ಳುವರು ಎಂಬುದು ಚುನಾವಣೆ ಬಳಿಕ ಕಾದು ನೋಡಬೇಕಿದೆ.