– ಶರಣಪ್ಪ ಕುಂಬಾರ.
ಕೊಪ್ಪಳ : ಜಿಲ್ಲೆಯ ಕುಷ್ಟಗಿಯಿಂದ ಪಟ್ಟದಕಲ್ಲುವರೆಗಿನ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಅಲ್ಲಲ್ಲಿ ತೆಪೆ ಕಾರ್ಯಗಳು ಆರಂಭವಾಗಿವೆ..!
ಕುಷ್ಟಗಿ ಹಾಗೂ ಈ ಭಾಗದಿಂದ ಚಾಲುಕ್ಯರ ಸಾಮ್ರಾಜ್ಯದ ಪ್ರಮುಖ ಸ್ಥಳಗಳಾದ ಪಟ್ಟದಕಲ್ಲು , ಐಹೊಳೆ, ಮಹಾಕೂಟ, ಬನಶಂಕರಿ ಹಾಗೂ ಬಾದಾಮಿ ಮೇಣ ಬಸದಿ ವೀಕ್ಷಿಸುವವರಿಗೆ ಕುಷ್ಟಗಿಯಿಂದ ಪಟ್ಟದಕಲ್ಲುವರೆಗಿನ ರಸ್ತೆ ಪ್ರಮುಖವಾಗಿ ಸಂಪರ್ಕ ಕಲ್ಪಿಸುತ್ತದೆ. ಇಂತಹ ಮಹತ್ವದ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಅಲ್ಲಲ್ಲಿ ದುರಸ್ತಿ ಕಾರ್ಯಗಳು ಜರುಗಿವೆ. ಕಾಮಗಾರಿ ಇನ್ನೂ ಪೂರ್ಣಗೊಳ್ಳುವ ಮುನ್ನವೇ ದುರಸ್ತಿಗೆ ಬಂದಿರುವುದು ಸಾರ್ವಜನಿಕರ ಕೊಪಕ್ಕೆ ಕಾರಣವಾಗಿದೆ. ಇಂತಹ ರಸ್ತೆ ಕಾಮಗಾರಿಗೆ ಯಾವ ಪ್ರಮಾಣದಲ್ಲಿ ಡಾಂಬರ್ ಸೇರಿದಂತೆ ಇತ್ಯಾದಿ ಸಾಮಾಗ್ರಿಗಳನ್ನು ಬಳಸಲಾಗಿದೆ ಎಂಬ ಅನುಮಾನ ಗ್ರಾಮಸ್ಥರಲ್ಲಿ ಮೂಡಿದೆ. ರಸ್ತೆ ಕಾಮಗಾರಿ ಮಾತ್ರ ಸಂಪೂರ್ಣ ಕಳಪೆಮಟ್ಟದಿಂದ ಕೂಡಿದ್ದಾಗಿದೆ. ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದರಿಂದಲೇ ಅಲ್ಲಲ್ಲಿ ಈ ದುರಸ್ತಿಗೆ ತೇಪೆ ಕಾರ್ಯಗಳು ಜೋರಾಗಿ ನಡೆದಿವೆ. ಸಂಪೂರ್ಣ ಕಳಪೆಯಿಂದ ಕೂಡಿದ ರಸ್ತೆ ಕಾಮಗಾರಿಯನ್ನು ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆಗೆ ಮುಂದಾಗಬೇಕಾಗಿದೆ..!!