– ರಸ್ತೆ ಅಗಲಿಕರಣ : ವ್ಯಾಪಾರಿಗಳ ಬದುಕು ಬೀದಿ ಪಾಲು..!

 

 

– ಶರಣಪ್ಪ ಕುಂಬಾರ.

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದಲ್ಲಿ ಹಾದು ಹೋಗಿರುವ ಪ್ರಮುಖ ರಸ್ತೆಯ ಅಗಲಿಕರಣದಿಂದ ಸುಮಾರು 40 ಜನ ವ್ಯಾಪಾರಿಗಳ ಬದುಕು ಬೀದಿ ಪಾಲಾಗಿದೆ..!

   ಕುಷ್ಟಗಿಯಿಂದ ಬಾದಾಮಿಗೆ ತೆರಳುವ ಹನುಮನಾಳದಲ್ಲಿ ಹಾದು ಹೋಗಿರುವ (ರಾಜ್ಯ ಹೆದ್ದಾರಿ) ಎಸ್.ಹೆಚ್-59 (ಕುಷ್ಟಗಿ – ಪಟ್ಟದಕಲ್ಲು) ರಸ್ತೆಯನ್ನು ಅಗಲಿಕರಣಗೊಳಿಸುವುದಾಗಿ ರಸ್ತೆ ಬದಿಯಲ್ಲಿನ ಸುಮಾರು 40 ಅಂಗಡಿಗಳನ್ನು ಈ ಹಿಂದೆ ತೆರವುಗೊಳಿಸಲಾಗಿತು. ಆದರೆ, ಆ ಪ್ರಮಾಣದಲ್ಲಿ ರಸ್ತೆ ಮಾತ್ರ ಅಗಲಿಕರಣವಾಗಲಿಲ್ಲ. ರಸ್ತೆಯಿಂದ ಬಹಳಷ್ಟು ದೂರವಿದ್ದುಕೊಂಡು ಅನೇಕ ವರ್ಷಗಳಿಂದ ವ್ಯಾಪಾರವನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದ ಸುಮಾರು 40 ಕ್ಕೂ ಅಧಿಕ ವ್ಯಾಪಾರಿಗಳು ಅಂಗಡಿಗಳನ್ನು ಮುರಾಬಟ್ಟಿಮಾಡಿಕೊಂಡು ಈ ಸದ್ಯದಲ್ಲಿ ಬೀದಿಗೆ ಬಿದ್ದಿದ್ದಾರೆ. ಬೀದಿಗೆ ಬಿದ್ದಿ ವ್ಯಾಪಾರಿಗಳಿಗೆ ತುತ್ತಿನ ಚೀಲ ತುಂಬಿಸಿಕೊಳ್ಳಲು ಇತ್ತ ಅಂಗಡಿಯೂ ಇಲ್ಲ.. ಉದ್ಯೋಗವು ಇಲ್ಲದಂತಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿರುವ ವ್ಯಾಪಾರಿಗಳು ಯಾರನ್ನೂ ನ್ಯಾಯ ಕೇಳದಂತಾಗಿದೆ..!?

(…ಮುಂದುವರೆಯುವುದು.)