ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜಾಗೀರಗುಡದೂರು, ಬಾದಿಮನಾಳ, ಹಾಬಲಕಟ್ಟಿ, ಹಿರೇಗೊಣ್ಣಾಗರ ಹಾಗೂ ಚಿಕ್ಕಗೊಣ್ಣಾಗರ ಗ್ರಾಮಗಳು ಸೇರಿದಂತೆ ಈ ಭಾಗದಲ್ಲಿನ ಬಹುತೇಕ ರೈತರು ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಚೆಂಡು ಹೂ ಬೆಳೆಯುವ ಮೂಲಕ ತಮ್ಮ ಆದಾಯ ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಒಂದು ಯಶಸ್ವಿ ವರದಿ ನಿಮಗಾಗಿ ಇಲ್ಲಿದೆ ನೋಡಿ..!
V/O : ಏಲ್ಲಿ ನೋಡಿದರು ಅಲ್ಲಿ ಹಳದಿ ಮಿಶ್ರಿತ ಕೆಂಪು ಬಣ್ಣದ ಚೆಂಡು ಹೂವಿನ ಬೆಳೆಯ ಕಲರವ ಈ ಭಾಗದಲ್ಲಿ ನೋಡಲು ಸಿಗುತ್ತದೆ. ಬೆಳೆಯ ಅಂದ ನೋಡುವುದೊಂದು ಸೌಭಾಗ್ಯ ಅಂದರೇ.. ತಪ್ಪಾಗಲಾರದು. ಒಂದು ಜಮೀನಿಗಿಂತ ಇನ್ನೊಂದು ಜಮೀನಿನಲ್ಲಿ ಅತ್ಯದ್ಭುತ ಚೆಂಡು ಹೂವಿನ ಬೆಳೆಯನ್ನು ನಾವು ಕಾಣ ಬಹುದಾಗಿದೆ. ಇಲ್ಲಿಯವರೆಗೂ ಸಜ್ಜೆ , ಗೋವಿನಜೋಳ, ಸೂರ್ಯಕಾಂತಿ ಇತ್ಯಾದಿ ಬೆಳೆಗಳನ್ನು ಬೆಳೆದು, ಅಷ್ಟಕಷ್ಟೇ ಲಾಭ ಪಡೆಯುತ್ತಿದ್ದ ಇಲ್ಲಿನ ರೈತರು ವಿಭಿನ್ನ ತೋಟಗಾರಿಕೆ ಬೆಳೆಯಾದ ಚೆಂಡು ಹೂವನ್ನು ಈ ವರ್ಷ ಬೆಳೆದಿರುವುದು ವಿಶೇಷ.
Byte : ಶಿವಪುತ್ರಪ್ಪ ಶಿರಗುಂಪಿ, ಜಾಗೀರಗುಡದೂರ ಗ್ರಾಮದ ರೈತ.
V/O : ಸಾಮಾನ್ಯ ಕೃಷಿಯಂತೆ ಮುಂಗಾರು ಹಂಗಾಮಿಗೆ ಪೂರಕವಾಗಿರುವಂತೆ ಚೆಂಡು ಹೂ ಬೆಳೆಯನ್ನು ಬೆಳೆಯಲು ಮುಂದಾಗಬಹುದು. ಚಿತ್ರದುರ್ಗ ಮೂಲದ ಎವಿಟಿ ಎಂಬ ಖಾಸಗಿ ಕಂಪನಿಯು ಒಂಪದದ ಮೇರೆಗೆ ಚೆಂಡು ಹೂ ಬೆಳೆಸಲು ಮುಂದೆ ಬಂದಿದೆ. ಅಧಿಕ ಇಳುವರಿ ಪಡೆದ ಈ ಭಾಗದ ರೈತರು ಒಂಪದದ (Agreement) ಹಿನ್ನಲೆಯಲ್ಲಿ ಚೆಂಡು ಹೂವನ್ನು ಪ್ರತಿ ಕೆ.ಜಿಗೆ 10 ರೂಪಾಯಿಗಳ ದರದಂತೆ ಮಾರಾಟಮಾಡುತ್ತಿದ್ದಾರೆ. ವಾರಕ್ಕೊಮ್ಮೆ ಕಟಾವು ಮಾಡುವ ಚೆಂಡು ಹೂವನ್ನು ಎಕರೆಗೆ 15 ಕ್ವಿಂಟಲ್ ಹೂ ಇಳುವರಿ ಪಡೆಯುತ್ತಿದ್ದಾರೆ.
Byte : ಪ್ರಶಾಂತ ನೀಲಗುಂದ, ಜಾಗೀರಗುಡದೂರು ಗ್ರಾಮದ ರೈತ.
V/O : ಎಕರೆವೊಂದರಲ್ಲಿ ಚೆಂಡು ಹೂ ಬೆಳೆದ ರೈತ 80 ಸಾವಿರ ರೂಪಾಯಿಗಳಿಂದ ಒಂದು ಲಕ್ಷ ರೂಪಾಯಿಗಳವರೆಗೆ ನಿವ್ವಳ ಆದಾಯ ನಿರೀಕ್ಷೆಯಲ್ಲಿ ರೈತರಿದ್ದಾರೆ. ಬೆಳೆಯಿಂದ ಜಮೀನಿಗೆ ಯಾವುದೇ ತರಹದ ಹಾನಿಯಾಗುವುದಿಲ್ಲ. ಜೊತೆಗೆ ಭೂಮಿಯಲ್ಲಿನ ಇಂಗಾಲದ ಪ್ರಮಾಣ ಹೆಚ್ಚಾಗುವವುದನ್ನು ಅರಿತಿರುವ ಈ ಭಾಗದ ರೈತರು ಪ್ರತಿ ವರ್ಷಕ್ಕಿಂತ ಹೆಚ್ಚು ಹೆಚ್ಚು ಜನ ಚೆಂಡು ಹೂ ಬೆಳೆ ಬೆಳೆಯುತ್ತಿದ್ದಾರೆ. ನಿವ್ವಳ ಆದಾಯ ಜೊತೆಗೆ ಭೂಮಿಯಲ್ಲಿನ ಸತ್ವ ಹೆಚ್ಚಾಗುವುದನ್ನು ಮನಗಂಡ ಈ ಭಾಗದ ರೈತರು ಚೆಂಡು ಹೂ ಬೆಳೆಗೊಂದು ನಿತ್ಯ ಸಲಾಂ ಹೇಳುತ್ತಿದ್ದಾರೆ..!!
# ಮುಖ್ಯಾಂಶಗಳು..!
# ಚಂಡು ಹೂ ಬೆಳೆದು ಯಶಸ್ವಿಯಾದ ಭಾಗದ ರೈತರು.. # ಎಕರೆಗೆ ಲಕ್ಷ ರೂಪಾಯಿಗಳ ಆದಾಯ.. # ಚಿತ್ರದುರ್ಗ ಮೂಲದ ಎವಿಟಿ ಗ್ರೂಪ್ ನಿಂದ ಬೀಜ ವಿತರಣೆ.. # ಬೆಳೆಯಿಂದ ಜಮೀನು ಫಲವತ್ತತೆ ಹೆಚ್ಚಾಗುವ ನಿರೀಕ್ಷೆ.. # ಜಮೀನಿನಲ್ಲಿರುವ ಇಂಗಾಲದ ಪ್ರಮಾಣ ಹೆಚ್ಚಳ..