– ಮದ್ಯದಂಗಡಿ ತೆರವುಗೊಳಿಸಲು ಗ್ರಾಮ ಪಂಚಾಯಿಂದಲೇ ದೂರು..!?

                                             ( ಸಂಗ್ರಹ ಫೋಟೋ)

– ಶರಣಪ್ಪ ಕುಂಬಾರ.

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಕಿಲ್ಲಾರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುವ ಅಂಗಡಿಗಳ ತೆರವುಗೊಳಿಸುವಂತೆ ಪಿಡಿಓ ತಾವರಗೇರಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ..!

     ಇತ್ತೀಚಿಗೆ ಜರುಗಿದ ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಸೇರಿದಂತೆ ಸಾರ್ವಜನಿಕರು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟವು ಎಗ್ಗಿಲ್ಲದೆ ನಡೆದಿದೆ ತೆರವುಗೊಳಿಸಲು ಒತ್ತಾಯಪಡಿಸಿದ್ದನ್ನು ದಿನಾಂಕ 16-10-2021 ರಂದು ನೀಡಿದ ದೂರಿನಲ್ಲಿ ಪಿಡಿಓ ಸ್ಪಷ್ಟಪಡಿಸಿದ್ದಾರೆ. ಸ್ವತಃ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯೇ ದೂರು ನೀಡಿದಾಗಲು ಯಾವುದೇ ರೀತಿಯಲ್ಲಿ ಅಕ್ರಮ ಮದ್ಯದ ಮಾರಾಟ ಮಾತ್ರ ನಿಯಂತ್ರಣವಾಗಿಲ್ಲವೆಂಬುದು ಕಿಲ್ಲಾರಹಟ್ಟಿ ಗ್ರಾಮಸ್ಥರ ಆರೋಪ..!!