– ಶರಣಪ್ಪ ಕುಂಬಾರ.
ಕೊಪ್ಪಳ : ವಿಧಾನ ಪರಿಷತ್ ಸಭಾಪತಿ ಹಾಗೂ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಅವರು ಕೊಪ್ಪಳಕ್ಕೆ ಭೇಟಿ ನೀಡಿದ್ದಾರೆ..!
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುವ ದಾರಿ ಮಧ್ಯದಲ್ಲಿ ಹೊರಟ್ಟಿ ಅವರು ಕೊಪ್ಪಳ ವಿಧಾನಸಭಾ ಕ್ಷೇತ್ರದ 2023 ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷ ಈಗಾಗಲೇ ಘೋಷಣೆ ಮಾಡಿದ ವೀರೇಶ ಮಹಾಂತಯ್ಯನಮಠ ಅವರ ನಿವಾಸಕ್ಕೆ ಭೇಟಿ ನೀಡಿ, ಪಕ್ಷದ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿದರು. ಪಕ್ಷ ಸಂಘಟನೆಗೆ ಕೆಲ ಸಲಹೆ ಸೂಚನೆಗಳನ್ನು ಈ ಸಂದರ್ಭದಲ್ಲಿ ನೀಡಿದರು. ಸನ್ಮಾನ ಸ್ವೀಕರಿಸಿದ ಬಳಿಕ ಹೊರಟ್ಟಿಯವರು ಬಳ್ಳಾರಿಯತ್ತ ಪ್ರಯಾಣ ಬೆಳೆಸಿದರು. ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ ವಕೀಲರು, ಮುಖಂಡರಾದ ಕರಾಟೆ ಮೌನೇಶ, ಮಂಜುನಾಥ ಸೊರಟೂರು, ಮಲ್ಲಿಕಾರ್ಜುನ ಗೌಡರ, ಸಿ.ಎಂ.ಹಿರೇಮಠ, ಅಶೋಕ ಉಮಲೂಟಿ, ಬಸವರಾಜ ನಾಯಕ, ಚನ್ನಬಸಪ್ಪ ಮುತ್ತಾಳ, ಸುರೇಶ ಗುರಿಕಾರ ಹಾಗೂ ಅಯುಬ್ ಅಡ್ಡೆವಾಲೆ ಸೇರಿದಂತೆ ನೂರಾರು ಜನ ಜೆಡಿಎಸ್ ಕಾರ್ಯಕರ್ತರು ತಮ್ಮ ಪಕ್ಷದ ಹಿರಿಯ ನಾಯಕ ಬಸವರಾಜ ಹೊರಟ್ಟಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡು ತೊರಿಸಿದ ಪ್ರೀತಿ ಮಾತ್ರ ಅತ್ಯದ್ಭುತವಾಗಿತ್ತು..!!