– ಶರಣಪ್ಪ ಕುಂಬಾರ.
ಕೊಪ್ಪಳ : ಇಲ್ಲೊಬ್ಬ ಸಂವಿಧಾನದ ಆರಾಧಕನಿದ್ದಾನೆ. ತನಗಿಷ್ಟದ ದೇವರ ಫೋಟೋಗಳಿಗೆ ನಿತ್ಯ ಪೂಜೆ ಕೈಗೊಳ್ಳುವಂತೆ ಸಂವಿಧಾನವನ್ನು ಕೂಡಾ ಇತ ನಿತ್ಯ ಪೂಜೆಗೈಯುತ್ತಾನೆ. ವಿಶ್ವದಲ್ಲಿಯೇ ಅತಿ ದೊಡ್ಡ ಸಂವಿಧಾನ ಎಂಬ ಖ್ಯಾತಿಗೆ ಪಾತ್ರರಾಗಿರುವ ಭಾರತದ ಸಂವಿಧಾನ ಎಂದರೆ ಇತನಿಗೆ ಪಂಚ ಪ್ರಾಣ. ಅದರ ಅಷ್ಟೇ, ಪ್ರೀತಿ. ಇಂತಹ ವಿಶಿಷ್ಟ ವ್ಯಕ್ತಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಬಸ್ ನಿಲ್ದಾಣದ ಮುಂಭಾಗದ ಹೋಟೆಲ್ ಉದ್ಯಮಿ ಸೋಮಲಿಂಗಪ್ಪ ಕುಂಬಾರ.
ಮೂಲತಃ ಹೋಟೆಲ್ ಉದ್ಯಮಿಯಾಗಿರುವ ಸೋಮಲಿಂಗಪ್ಪ ಇವರಿಗೆ ಭಾರತ ಸಂವಿಧಾನದ ಮೇಲೆ ಎಲ್ಲಿಲ್ಲದ ನಂಬಿಕೆ ಮತ್ತು ಅಪಾರ ಪ್ರೀತಿ. ಸೋಮಲಿಂಗಪ್ಪ ಅವರು ಅಷ್ಟೇನು ಉನ್ನತ ಅಭ್ಯಾಸ ಮಾಡಲಿಲ್ಲಿಂದ್ರ ಕೂಡಾ ಸಂವಿಧಾನ ಅದೊಂದು ಪವಿತ್ರ ಗ್ರಂಥ, ಭಾರತ ದೇಶದ ಜನರ ಪಾಲಿಗೆ ಅದು ಜೀವಂತ ದೇವಾಲಯ ಎಂಬುದು ಇವರ ಭಾವನೆ. ಸಂವಿಧಾನವು ಧರ್ಮಗ್ರಂಥಗಳಿಗಿಂತಲೂ ಶ್ರೇಷ್ಠ ಎಂಬುದು ಇವರ ಅಪ್ಪಟ ನಂಬಿಕೆ. ಸಂವಿಧಾನದ ಮುಖಪುಟದ ಫೋಟೋ ಜೊತೆಗೆ ಪೀಠಿಕೆಯ (ಪ್ರಿಯಾಂಬಲ್) ಪುಟವನ್ನು ದೊಡ್ಡದಾಗಿ ಫೋಟೋ ರೂಪದಲ್ಲಿ ತಯಾರಿಸಿದ್ದನ್ನು ನಿತ್ಯ ಆರಾಧಿಸುವುದು ಸೋಮಲಿಂಗಪ್ಪ ಸೇರಿದಂತೆ ಈ ಹೋಟೆಲ್ ನವರಿಗೆ ನಿತ್ಯ ರೂಢಿ. ಹೋಟೆಲ್ ಗೆ ಆಗಮಿಸುವ ಬಹುತೇಕರು, ದೇವರ ಫೋಟೋಗಳ ಜೊತೆಗೆ ನೇತು ಹಾಕಿರುವ ಸಂವಿಧಾನದ ಫೋಟೋಗಳ ಮೇಲೆ ಕಣ್ಣು ಹಾಯಿಸದೆ ಇರುವವರು ತುಂಬಾ ವಿರಳ. ಅಷ್ಟೇ ಅಲ್ಲ , ಸಂವಿಧಾನದ ಮೇಲಿರುವ ಅಪಾರ ಅಭಿಮಾನವನ್ನು ಪ್ರಶ್ನಿಸುವುದು ಕೂಡಾ ಸಾಮಾನ್ಯ. ಸಂವಿಧಾನ ರಚನೆಯ ಪಿತಾಮಹ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ರಚನಾ ಸಮಿತಿ ಇನ್ನೊಬ್ಬ ಹಿರಿಯ ಸದಸ್ಯ ಮಹಾರಾಷ್ಟ್ರದ ರತ್ನಪ್ಪ ಕುಂಬಾರ ಸೇರಿದಂತೆ ಇನ್ನೂಳಿದ ಮಹಣಿಯರನ್ನು ಸ್ಮರಿಸಿಕೊಳ್ಳುವುದು ಮಾತ್ರ ಇವರು ಎಂದಿಗೂ ಮರೆಯುವುದಿಲ್ಲ. ಸಂವಿಧಾನದ ಜೊತೆಗೆ ಕನ್ನಡದ ಪ್ರಸಿದ್ಧ ಕವಿಗಳ ಫೋಟೋಗಳು ರಾಜಾಜಿಸುತ್ತಿವೆ. ಇವರ ಆತ್ಮೀಯ ಮಿತ್ರ ಹಂಪಣ್ಣ ಬಳಗೇರಿ ಹಾಗೂ ಜೇಷ್ಠ ಸುಪುತ್ರ ಭಗತ್ ಕುಂಬಾರ ಕೂಡಾ ತಂದೆಯವರ ಹಾದಿಯಲ್ಲಿಯೇ ಮುನ್ನಡೆಯುತ್ತಿದ್ದಾರೆ..!!