– ಶರಣಪ್ಪ ಕುಂಬಾರ.
ಕೊಪ್ಪಳ : ರಾಜ್ಯ ಸರಕಾರಿ ನೌಕರರಿಗೆ ದೀಪಾವಳಿ ಹಬ್ಬದ ಮುನ್ನವೇ ರಾಜ್ಯ ಸರಕಾರವು ಬಂಪರ್ ಕೊಡುಗೆ ನೀಡಿದೆ..!
ರಾಜ್ಯ ಸರಕಾರಿ ನೌಕರರಿಗೆ ಶೇ 3 ರಷ್ಟು ತುಟ್ಟಿ ಭತ್ಯೆ ನೀಡಲು ಮುಂದಾಗಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಇಲ್ಲಿಯವರೆಗೆ ಜಾರಿಗೆಯಲ್ಲಿದ್ದ 21.50 ತುಟ್ಟಿ ಭತ್ಯೆಗೆ ಈ ಸದ್ಯದ ಶೇ 3 ರಷ್ಟು ತುಟ್ಟಿ ಸೇರಿಸಲಾಗಿ ಒಟ್ಟು ಶೇ 24.50 ರಷ್ಟು ಪ್ರಮಾಣಕ್ಕೆ ತುಟ್ಟಿ ಭತ್ಯೆ ಬಂದು ತಲುಪಿದೆ. ಈ ಸದ್ಯದ ಶೇ.3 ರ ಹೆಚ್ಚಳ ತುಟ್ಟಿ ಭತ್ಯೆಯನ್ನ 01-07-2021 ರಿಂದ ಜಾರಿಗೆ ಬರುವಂತೆ ಆರ್ಥಿಕ ಇಲಾಖೆಯ ಉಪಕಾರ್ಯದರ್ಶಿ ಉಮಾ.ಕೆ ಅವರು ಹೊರಡಿಸಿದ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ. ಇತ್ತೀಚಿಗೆ ಕೇಂದ್ರ ಸರಕಾರವು ತನ್ನ ನೌಕರರಿಗೆ ಶೇ.3 ರಷ್ಟು ಹೆಚ್ಚಳವಾಗಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ತುಟ್ಟಿ ಭತ್ಯೆ ಹೆಚ್ಚಳಕ್ಕೆ ಮುಂದಾಗಿರುವ ರಾಜ್ಯ ಸರಕಾರದ ಕ್ರಮಕ್ಕೆ ರಾಜ್ಯ ಸರಕಾರಿ ನೌಕರರು ಅಭಿನಂದಿಸಿದ್ದಾರೆ..!!