– ಸಕಲ ಜೀವಾತ್ಮಗಳಿಗೆ ಪ್ರವಾದಿ ಮಹ್ಮದರು ಅತ್ಯುತ್ತಮ ಮಾದರಿ : ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು..!

 

 

ಕೊಪ್ಪಳ : ಜಮಾತೇ ಇಸ್ಲಾಮಿ ಹಿಂದ್ ವತಿಯಿಂದ ಪತ್ರಿವರ್ಷದಂತೆ ಈ ವರ್ಷವು ಕೂಡಾ ಅಕ್ಟೋಬರ್ ನಲ್ಲಿ ಜರಗುವ “ಪ್ರವಾದಿ ಮಹಮ್ಮದರ ಅತ್ಯುತ್ತಮ ಮಾದರಿ” ಎಂಬ ಧ್ಯೇಯ ವಾಕ್ಯದಡಿಯಲ್ಲಿ ರಾಜ್ಯವ್ಯಾಪ್ತಿ ನಡೆಯುತ್ತಿರುವ ಸೀರತ ಅಭಿಯಾನದ ಅಂಗವಾಗಿ ಜಿಲ್ಲೆಯ ತಾವರಗೇರಾ ಘಟಕದ ವತಿಯಿಂದ ಸ್ಥಳಿಯ ಮಜ್ಜೀದೆ ಅಕ್ಸಾ ಆವರಣದಲ್ಲಿ ನಡೆದ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಷ್ಟಗಿಯ ಮದ್ದಾನೇಶ್ವರ ಮಠದ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಭಾಗವಹಿಸಿ ಮಾತನಾಡಿ, ದೇಶ ಹಾಗೂ ಸಮಾಜದ ಅಭಿವೃದ್ದಿಯಾಗಬೇಕೆಂದರೆ. ಸಕಲ ಜೀವಾತ್ಮಗಳಿಗೆ ಮಾದರಿಯಾಗಿರುವ ಪ್ರವಾದಿ ಮಹಮ್ಮದರ. ಹಾಗು ಹಲವಾರು ಶರಣರು. ದಾರ್ಶನಿಕ ವ್ಯಕ್ತಿಗಳ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮೊದಲು ನಮ್ಮ ಮನಸ್ಸುಗಳು ಮತ್ತು ಸುತ್ತಮುತ್ತಲಿನ ವಾತಾವರಣ ಶುದ್ದಿಮಾಡಿಕೊಂಡರೆ ಮಾತ್ರ ಅಭಿವೃದ್ದಿಯಾಗಲು ಸಾಧ್ಯ. ಹಾಗೂ ಈಗ ಕಾರ್ಯ ನಿರ್ವಹಿಸುತ್ತಿರುವ ಜಮಾತೇ ಇಸ್ಲಾಮೀ ಹಿಂದ್ ಮತ್ತು ಎಲ್ಲಾ ಸಂಘಟನೆಗಳು ಮತಭೇದವನ್ನು ಮರೆತು ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದರೆ ಅತ್ಯುತ್ತಮ ಮಾದರಿ ಸಮಾಜ ನಿರ್ಮಾಣ ಮಾಡಬಹುದು ಎಂದು ಹೇಳಿದರು.
  ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಇಲಕಲ್ಲ ಪಟ್ಟಣದ ಲಾಲಹುಸೇನ್ ಕಂದಗಲ್ಲ್ ಅವರು ಮಾತನಾಡಿ  ಪ್ರಸ್ತುತ ಸನ್ನಿವೇಶದಲ್ಲಿ ಯುವಕರು ಜೂಜು, ಮದ್ಯಪಾನ, ಸಾಮಾಜಿಕ ಜಾಲತಾಣಗಳಲ್ಲಿ ನಿರತರಾಗಿ ತಮ್ಮ ಮೂಲ ಜವಾಬ್ದಾರಿಯನ್ನೇ ಮರೆತಿದ್ದಾರೆ. ಇಂತಹವರನ್ನು ಚಟಗಳಿಂದ ಹೊರ ಬರಲು ಸರ್ವಧರ್ಮದವರು ಯುವಕರಿಗೆ ಆದ್ಯಾತ್ಮಕವಾಗಿ ಮನಪರಿವರ್ತನೆಯಾಗುವಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟನೆಗಳು ಹಮ್ಮಿಕೊಳ್ಳಬೇಕೆಂದರು. ಅತಿಥಿಗಳಾಗಿ ಆಗಮಿಸಿದ ಎಸ್.ಎಮ್.ವಿ. ಕಾಲೇಜಿನ ಪ್ರಾಂಶುಪಾಲ ಲಕ್ಷ್ಮಣಸಿಂಗ್ ವಗರನಾಳ ಅವರು ಮಾತನಾಡಿ, ಆರನೇ ಶತಮಾನದಲ್ಲಿ ಜನಿಸಿದ ಪ್ರವಾದಿ ಮಹಮ್ಮದರ ಹದಿಸಗಳು ಹಾಗೂ ೧೨ನೇ ಶತಮಾನದಲ್ಲಿ ಜನಿಸಿದ ಬಸವಣ್ಣನವರ ವಚನ ಸಾಹಿತ್ಯ ಮತ್ತು ಇಂತಹ ಮಹಾನ್ ವ್ಯಕ್ತಿಗಳು ಸಮೃದ್ಧ ಸಮಾಜ ನಿರ್ಮಿಸಲು ತಮ್ಮ ಜೀವಮಾನವೆಲ್ಲ ಶ್ರಮಿಸಿ ಸಮಾಜದಲ್ಲಿನ ಎಲ್ಲಾ ಜನಾಂಗದರು ಸಹೋದರರಂತೆ ಜೀವಿಸಲು ಹಾಕಿಕೊಟ್ಟಿರುವ ಮಾರ್ಗೊಪಾಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಶೋಷಣೆ ಮುಕ್ತ ಸಮಾಜ ನಿರ್ಮಿಸಲು ಕೈಜೊಡಿಸಬೇಕೆಂದರು.  ಫಯಾಜ್ ಸಾಬ ಮುಲ್ಲಾ ನಿರೂಪಿಸಿದರು. ಸಂಘಟನೆಯ ಸ್ಥಳಿಯ ಸಂಚಾಲಕ ಮೈನುದ್ದಿನ್ ಮನಿಯಾರ ವಂದಿಸಿದರು. ಸಂಘಟನೆಯ ಮುಜೀಬ್, ಮುಜಾಹೀದ್, ಅಮೀನ್, ಹಾಫೀಜ್ ರಫೀಸಾಬ. ಸಲಿಂ ಮನಿಯಾರ. ಎಮ್.ಡಿ. ರಫೀ ಹಾಗೂ ಪಟ್ಟಣದ ಎಲ್ಲಾ ಸರ್ವ ಧರ್ಮೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..!!