– ಶರಣಪ್ಪ ಕುಂಬಾರ.
ಕೊಪ್ಪಳ : ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪುನೀತ್ ರಾಜಕುಮಾರ (46) ಇನ್ನಿಲ್ಲ..!
ತೀವ್ರ ಹೃದಯಾಘಾತಕ್ಕೆವೊಳಗಾದ ಪುನೀತ್ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗಲಿಲ್ಲ. 50 ಕ್ಕೂ ಹೆಚ್ಚು ಸ್ಯಾಂಡಲವುಡ್ ಸಿನಿಮಾಗಳಲ್ಲಿ ನಟಿಸಿರುವ ‘ಅಪ್ಪು’ ಅಗಲಿದ್ದು 6 ಕೋಟಿ ಕನ್ನಡಿಗರ ಪಾಲಿಗೆ ನುಂಗುಲಾರದ ತುತ್ತಾಗಿದೆ. ಬಾಲನಟನೆಯ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಪುನೀತ್ ರಾಜಕುಮಾರ ಬಾಲ್ಯದಲ್ಲೇ ‘ಬೆಟ್ಟದ ಹೂ’ ಸಿನಿಮಾದಲ್ಲಿ ನಟಿಸುವ ಮೂಲಕ ರಾಷ್ಟ್ರ ಪ್ರಶಸ್ತಿ ಮೂಡಿಗೇರಿಸಿಕೊಂಡಿದ್ದರು.
ಬಾಲನಟನಾಗಿ, ನಾಯಕನಟನಾಗಿ, ಗಾಯಕನಾಗಿ ಹಾಗೂ ಸಮಾಜ ಸೇವೆ ಮೂಲಕ ಕನ್ನಡಿಗರ ಹೃದಯ ಕದ್ದಿದ್ದ ಪುನೀತ್ ಇನ್ನೂ ನೆನಪು ಮಾತ್ರ..!!