ಕೊಪ್ಪಳ : ಕೊಪ್ಪಳದ ಅಪ್ಪುವಿನ ಅಪ್ಪಟ ಅಭಿಮಾನಿವೊಬ್ಬ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ..!
ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರ ಸಾವಿನ ಸುದ್ದಿಯಿಂದ ಅಸುನಿಗಿದ ಅಪ್ಪಟ ಅಭಿಮಾನಿ ಕೊಪ್ಪಳ ತಾಲೂಕಿನ ಚಿಕ್ಕ ಬಗನಾಳ ಗ್ರಾಮದ ಜ್ಞಾನೇಶ ತಿಮ್ಮಣ್ಣ ನಿಂಗಾಪೂರ (40) ನತದೃಷ್ಟ. ತನ್ನ ನೆಚ್ಚಿನ ನಟ ಹೃದಯಾಘಾತದಿಂದ ಅಗಲಿದ ಸುದ್ದಿಯಿಂದ ವಿಚಲಿತನಾದ ಜ್ಞಾನೇಶನಿಗೆ ಶನಿವಾರ ಬೆಳಗಿನ ಜಾವ ತೀವ್ರ ಹೃದಯಘಾತವಾಗಿ ಸಾವನ್ನಪ್ಪಿದ್ದಾನೆ. ಘಟನೆಯಿಂದ ಇಡೀ ಗ್ರಾಮವು ಸ್ಮಶಾನ ಮೌನದಲ್ಲಿದೆ. ಪತ್ನಿ , ಇಬ್ಬರು ಪುತ್ರಿಯರು, ಒರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಜ್ಞಾನೇಶನಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರರ ಮೇಲೆ ಎಲ್ಲಿಲ್ಲದ ಪ್ರೀತಿ. ಅದರ ಅಷ್ಟೇ ಅಭಿಮಾನ. ಪುನೀತ್ ಅವರಿಗೆ ಹೃದಯಾಘಾತವಾದ ಸುದ್ದಿ ಮಾಧ್ಯಮಗಳಲ್ಲಿ ಹರಡುತ್ತಿದ್ದಂತೆ ಬಹಳಷ್ಟು ನೊಂದು ಇಡೀ ದಿವಸ ಜ್ಞಾನೇಶ ಮೌನಕ್ಕೆ ಶರಣಾಗಿದ್ದಾನೆ. ರಾತ್ರಿಯಿಡೀ ತನ್ನ ನಟನ ಸಾವಿನ ಸುದ್ದಿ ವಿಕ್ಷಣೆಯಲ್ಲಿದ್ದವ ಬೆಳಗಿನ ಜಾವ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿರುವುದನ್ನು ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ..!!