– ಮುತ್ತಿಟ್ಟು ವಿದಾಯ ಹೇಳಿದ ಬೊಮ್ಮಾಯಿ..!

– ಶರಣಪ್ಪ ಕುಂಬಾರ.

ಕೊಪ್ಪಳ : ಹಣೆಗೆ ಮುತ್ತಿಡುವ ಮೂಲಕ ಅಗಲಿದ ನಟ ಪುನೀತ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊನೆಯದಾಗಿ ವಿದಾಯ ಹೇಳಿದರು..! 

ಹೃದಯಾಘಾತದಿಂದ ಅಗಲಿದ ಖ್ಯಾತ ನಟ ಪುನೀತ ರಾಜಕುಮಾರ ಅವರಿಗೆ ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ಜರುಗಿದ ಅಂತಿಮ ಸಂಸ್ಕಾರದಲ್ಲಿ ಭಾಗಿಯಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತುಂಬಾ ಭಾವುಕರಾಗಿ ಅಪ್ಪು ಅವರ ಪಾರ್ಥಿವ ಶರೀರದ ಹಣೆಗೆ ಮುತ್ತಿಟ್ಟು ವಿದಾಯ ಹೇಳಿದ್ದು ಮಾತ್ರ ನೆರದಿದ್ದವರ ದುಃಖದ ಕಟ್ಟೆ ಹರಿದು ಬರಲು ಕಾರಣವಾಗಿತು. ಈ ಸಂದರ್ಭದಲ್ಲಿ ಸಕಲ ಸರಕಾರಿ ಗೌರವ ಸಮರ್ಪಿಸಲಾಯಿತು.

ಬೊಮ್ಮಾಯಿ ಅವರು ಈ ಸಂದರ್ಭದಲ್ಲಿ ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ರಾಷ್ಟ್ರ ಧ್ವಜ ಅರ್ಪಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಡಿಯೂರಪ್ಪ , ಡಿಕೆ ಶಿವಕುಮಾರ್, ಶಿವರಾಜಕುಮಾರ, ರಾಘವೇಂದ್ರರಾಜಕುಮಾರ, ರಾಜ್ ಕುಟುಂಬಸ್ಥರು, ಮಂತ್ರಿಗಳು, ಚಿತ್ರರಂಗದ ಗಣ್ಯರು, ಲಕ್ಷಾಂತರ ಜನ ಅಭಿಮಾನಿಗಳು ಭಾಗವಹಿಸಿ ಅಗಲಿದ ಅಪ್ಪುಗೆ ಅಂತಿಮ ನಮನ ಸಲ್ಲಿಸಿದರು..!!