– ಹಿರೇಮನ್ನಾಪೂರದಲ್ಲಿ ಸಡಗರ ಸಂಭ್ರಮದ ರಾಜ್ಯೋತ್ಸವ..!

 

 

– ಶರಣಪ್ಪ ಕುಂಬಾರ.

ಕೊಪ್ಪಳ : ನಾಡು, ನುಡಿಗಾಗಿ ಶ್ರಮಿಸಿದವರನ್ನು ಇಂದು ನೆನೆಯಬೇಕಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ಅಭಿಪ್ರಾಯವ್ಯಕ್ತಪಡಿಸಿದರು..!

  ಅವರು ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರು ಗ್ರಾಮದ ಶ್ರೀ ಗವಿಸಿದ್ಧೇಶ್ವರ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ 66 ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕನ್ನಡ ಭಾಷೆ ಉಳಿಯಲು ಎಲ್ಲರ ಪಾತ್ರ ಮುಖ್ಯವಾಗಿರುತ್ತದೆ. ತಾಯಿ ಭಾಷೆಯಾಗಿರುವ ಕನ್ನಡದ ಮೇಲೆ ಎಲ್ಲರೂ ವ್ಯಾಮೋಹ ತೋರಿಸುವ ಅಗತ್ಯವಿದೆ ಎಂದು ಬಯ್ಯಾಪೂರು ಹೇಳಿದರು. ಅಲ್ಲದೆ, ಸಂಸ್ಥೆಯ ಕಟ್ಟಡ ನಿರ್ಮಾಣಕ್ಕಾಗಿ ಶಾಸಕರ ವಿಶೇಷ ಅನುದಾನದಲ್ಲಿ 10 ಲಕ್ಷ ರೂಪಾಯಿಗಳ ಅನುದಾನ ನೀಡುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.

  ಶ್ರೀ ಮರಿಶಾಂತವೀರ ಮಹಾಸ್ವಾಮಿ ಗ್ರಾಮೀಣ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕಾರ್ಯಾಧ್ಯಕ್ಷ ವೀರೇಶಪ್ಪ ಸೂಡಿ, ದೇವಪ್ಪ ಗಂಗನಾಳ, ಮಲ್ಲಯ್ಯ ಹಿರೇಮಠ, ಬಸವರಾಜ ಮೇಳಿ, ಹನುಮಂತಪ್ಪ ಅಳ್ಳಳ್ಳಿ , ಮುಖ್ಯಗುರು ಎಸ್.ಜಿ.ಕಡೆಮನಿ, ದೈಹಿಕ ಶಿಕ್ಷಕ ವಿ.ಎಸ್.ಕಾಡಗಿಮಠ, ಶಿಕ್ಷಕರಾದ ಎಸ್.ವಾಯ್ ಕಂಚಿ, ಶಿವಾನಂದ ಹಿರೇಮಠ, ರಂಗನಾಥ ಸುಭೇದಾರ, ಬಸವರಾಜ ಹಿರೇಮಠ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮದ ಮುಖಂಡರು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಮಲ್ಲಿಕಾರ್ಜುನ ಗಂಗನಾಳ ಅವರು ಕನ್ನಡ ರಾಜ್ಯೋತ್ಸವದ ಕುರಿತು ವಿಶೇಷ ಉಪನ್ಯಾಸ ನೀಡಿದರು..!!