– ಸಂಗಮೇಶ ಮುಶಿಗೇರಿ
ಕೊಪ್ಪಳ (ಕುಷ್ಟಗಿ) : ಅಕಾಲಿಕ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ, ಜೆಡಿಎಸ್ ಪಕ್ಷದ ಮುಖಂಡರು ಕುಷ್ಟಗಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು..!
ಕೊರೋನಾ ಸಂದರ್ಭದಲ್ಲಿ ಆರ್ಥಿಕ ತೊಂದರೆಗಳನ್ನು ಅನುಭವಿಸಿದ ರೈತರು ತೊಗರಿ, ಕಡಲೆ, ಹೆಸರು, ಹಲಸಂದಿ, ಮಡಕೆ, ಜೋಳ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆದಿದ್ದರು. ಕಟಾವಿನ ಹಂತದಲ್ಲಿರುವ ಬೆಳೆ ಕಂಡ ರೈತರು ಸ್ವಲ್ಪ ಚೇತರಿಸಿಕೊಳ್ಳುವ ಸಂದರ್ಭದಲ್ಲಿ ಚಂಡಮಾರುತದಿಂದಾಗಿ ಕುಷ್ಟಗಿ ತಾಲೂಕು ಸೇರಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಅತಿಯಾಗಿ ಸುರಿದ ನಿರಂತರ ಮಳೆಯಿಂದ ಬೆಳೆಗಳೆಲ್ಲಾ ಸಂಪೂರ್ಣ ಹಾಳಾಗಿ ಹೋಗಿವೆ. ಬೆಳೆ ಹಾನಿಯಿಂದ ಕಂಗಾಲಾಗಿರುವ ಜಿಲ್ಲೆಯ ಎಲ್ಲಾ ರೈತರಿಗೆ ಪ್ರತಿ ಎಕರೆಗೆ 25000 ಸಾವಿರ ರೂಪಾಯಿಗಳನ್ನು ನೈಸರ್ಗಿಕ ವಿಕೋಪ ಪರಿಹಾರದಡಿ ಕೂಡಲೇ ರಾಜ್ಯ ಸರ್ಕಾರ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಅವರಿಗೆ ಬರೆದ ಮನವಿ ಪತ್ರವನ್ನು ಗ್ರೇಡ್-2 ತಹಸೀಲ್ದಾರ ಮುರಳಿಧರ ಅವರ ಮೂಲಕ ಸಲ್ಲಿಸಿದರು.
ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ (ನವಲಹಳ್ಳಿ) ವಕೀಲರು, ತಾಲೂಕಾಧ್ಯಕ್ಷ ಬಸವರಾಜ ನಾಯಕ, ರಾಜ್ಯ ಜಂಟಿ ಕಾರ್ಯದರ್ಶಿ ಸಿ.ಎಂ.ಹಿರೇಮಠ, ನಗರ ಘಟಕದ ಅಧ್ಯಕ್ಷ ಸೈಯದ್ ಜುಲ್ಫಿಕರ್, ಮುಖಂಡರಾದ ಮಹ್ಮದ್ ಶಾಮಿದ್ ಗಂಧಎಣ್ಣಿ, ಕಾರ್ಯದರ್ಶಿ ಶಶಿಧರ ಕುಂಬಾರ, ಖಾದರ್ ಭಾಷಾ ಕಾಯಿಗಡ್ಡಿ, ಯುವ ಘಟಕದ ಅಧ್ಯಕ್ಷ ನಿಂಗಪ್ಪ ಜಿಗೇರಿ, ಸುಭಾಷ್ ಮುಗಣ್ಣೆ, ಮೈಲಾರಪ್ಪ ಮಂತ್ರಿ ಸೇರಿದಂತೆ ಇನ್ನಿತರರಿದ್ದರು.