– ಜನರಲ್ಲಿ ಆತಂಕ ತಂದಿಟ್ಟ ಬ್ಲ್ಯಾಕ್‌ ಫಂಗಸ್..!

  • ಶರಣಪ್ಪ ಕುಂಬಾರ.

ಕೊಪ್ಪಳ : ಕೊರೋನಾ ವೈರಸ್ ಪ್ರಭಾವದ ಬಳಿಕ ಒಂದಿಲ್ಲಾ ಒಂದು ಸಂಕಷ್ಟದಲ್ಲಿ ಸಿಲುಕುತ್ತಿರುವ ನಾಡಿನ ಜನರಿಗೆ ಈಗ ಬ್ಲ್ಯಾಕ್ ಫಂಗಸ್ ಎಂಬ ಮತ್ತೊಂದು ಮಹಾಮಾರಿಯದ್ದೆ ಚಿಂತೆಯಾಗಿದೆ..! ಇಂತಹ ಮಹಾಮಾರಿ ಫಂಗಸ್ ನ ಕುರಿತು ಮತ್ತೊಂದು ಸುದ್ದಿ ಹೊರಬಿದ್ದಿದ್ದು , ಜನರನ್ನು ಬೆಚ್ಚಿ ಬೀಳಿಸಿದೆ. ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಹೆಚ್ಚಾಗಿ ಬ್ಲಾಕ್ ಫಂಗಸ್ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೀಡು ಮಾಡಿದ್ದು , ಈ ಸಂಬಂಧ ಏಮ್ಸ್​​​ನ ನ್ಯೂರೋಸರ್ಜನ್​​​ ವೈದ್ಯ ಡಾ. ಶರತ್ ಚಂದ್ರ, ಸತತ 2 ರಿಂದ 3 ವಾರಗಳ ಕಾಲ ಒಂದೇ ಒಂದು ಮಾಸ್ಕನ್ನು ಧರಿಸುವುದರಿಂದಲೂ ಬ್ಲ್ಯಾಕ್​​ ಫಂಗಸ್​​ ಬರುತ್ತದೆ ಎಂದು ಹೇಳಿದ್ದಾರೆ. ಸತತ ಒಂದೇ ಮಾಸ್ಕನ್ನು ಧರಿಸುವುದರಿಂದ ಫಂಗಸ್​​ ಬರುವ ಸಾಧ್ಯತೆ ಹೆಚ್ಚಿದೆ ಎಂದು ಎಚ್ಚರಿಸಿದ್ದಾರೆ.


ಸ್ವಚ್ಛಗೊಳಿಸದೆ ಒಂದೇ ಮಾಸ್ಕ್ ಅನ್ನು ಪದೆ ಪದೇ ಉಪಯೋಗ ಮಾಡುವುದರಿಂದ ಸುಲಭವಾಗಿ ಫಂಗಸ್ ಬೆಳೆಯುತ್ತದೆ. ಆದ್ದರಿಂದ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್​ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅನಿಯಂತ್ರಿತ ಮಧುಮೇಹ, ಅತಿಯಾದ ಸ್ಟಿರಾಯಿಡ್​​ ಬಳಕೆ, ಮೆಡಿಕಲ್​ ಆಕ್ಸಿಜನ್​​ ಪಡೆದವರು ಸೋಂಕಿತರಾದ 6 ತಿಂಗಳುಗಳ ಒಳಗೆ ಬ್ಲ್ಯಾಕ್​​ ಫಂಗಸ್​ಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಎಂದು ಏಮ್ಸ್​​ ವೈದ್ಯರು ಮಾಹಿತಿ ನೀಡಿದ್ದಾರೆ. ಈ ಭಯಾನಕ ಸುದ್ದಿಯಿಂದ ನಾಡಿನ ಜನರು ಆತಂಕದಲ್ಲಿದ್ದಾರೆ..!!