– ಶರಣಪ್ಪ ಕುಂಬಾರ.
ಕೊಪ್ಪಳ : ಅಂಬುಲೆನ್ಸ್ ಇಲ್ಲದೆ ಸಾಕಷ್ಟು ರೋಗಿಗಳನ್ನು ರಕ್ಷಿಸಲು ಆಗದೆ ಕೈಚೆಲ್ಲಿ ಕುಳಿತುಕೊಂಡಿರುವ ಸರಕಾರಿ ಆಸ್ಪತ್ರೆಗಳಿಗೆ ಎರಡು ಅಂಬುಲೆನ್ಸ್ ಗಳನ್ನು ಹುಟ್ಟು ಹಬ್ಬದ ನಿಮಿತ್ಯವಾಗಿ ದಾನ ನೀಡುವ ಮೂಲಕ ಸಮಾಜ ಸೇವಕ ಹಾಗೂ ನಿವೃತ್ತ ಅಧಿಕಾರಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ..!
ಇಂತಹ ಮಾನವೀಯ ಕಳಕಳಿಯ ಗುಣಗಳನ್ನು ಹೊಂದಿರುವ ವಿಶಿಷ್ಟ ಅಧಿಕಾರಿ ಬೇರೆ ಯಾರು ಅಲ್ಲ ಕೊಪ್ಪಳದಲ್ಲಿ ಕೆ.ಆರ್.ಡಿ.ಐ.ಎಲ್ ನ ಕಾರ್ಯಪಾಲಕ ಅಭಿಯಂತರರಾಗಿ ಸೇವೆ ಸಲ್ಲಿಸುವ ಮೂಲಕ ಬಹಳಷ್ಟು ಹೆಸರುವಾಸಿಯಾಗಿದ್ದ ಇವರು ಈಗ ತಮ್ಮ ಸ್ವಂತ ಗ್ರಾಮ ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಾಸಳ ಗ್ರಾಮದಲ್ಲಿ ಜೆ.ಎಂ.ಕೋರಬು ಎಂಬ ಫೌಂಡೇಶನ್ ಸ್ಥಾಪಿಸುವ ಮೂಲಕ ಸಮಾಜ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜ ಸೇವೆಗಾಗಿ ಸದಾ ಕಾಲ ದಡಿಯುತ್ತಿರುವ ಜೆ.ಎಂ.ಕೋರಬು ಅವರು ಸ್ವಂತ ಹಣದಲ್ಲಿ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕೆನ್ನುವುದು ಅವರ ಅಚಲ ನಿರ್ಧಾರ ಕೂಡಾ ಒಂದಾಗಿದೆ. ಜೆ.ಎಂ.ಕೋರಬು ಫೌಂಡೇಶನ್ ಮೂಲಕ ಈಗಾಗಲೇ ಸಾಕಷ್ಟು ಸಮಾಜ ಸೇವೆ ಸಲ್ಲಿಸಿರುವ ಕೋರಬು ಅವರು ಕೊರೋನಾ ವೈರಸ್ ನಿಯಂತ್ರದಲ್ಲಿ ಕೊರತೆ ಅನುಭವಿಸುತ್ತಿರುವ ಸರಕಾರಿ ಆಸ್ಪತ್ರೆಗಳಿಗೆ ಅಂಬುಲೆನ್ಸ್ ಸೇವೆ ಒದಗಿಸಿದ್ದು ಮಾತ್ರ ಅನನ್ಯ. ಅಂಬುಲೆನ್ಸ್ ಸೇವೆಗೆ ವಾಹನಗಳನ್ನು ಅರ್ಪಿಸುವ ವಿಶಿಷ್ಟವಾದ ಕಾರ್ಯಕ್ರಮದಲ್ಲಿ ನೂರಾರು ಕುಟುಂಬಗಳಿಗೆ ದಿನಸಿ ಪದಾರ್ಥಗಳನ್ನು ನೀಡಿ, ಸಮಾಜದಲ್ಲಿ ಸೈ ಎನಿಸಿಕೊಂಡಿದ್ದಾರೆ. ತನ್ನ ಬಳಿಯಿರುವ ಎಲ್ಲಾ ಹಣವನ್ನು ಸಮಾಜ ಸೇವೆಗೆ ಮೀಸಲಿರಿಸಿರುವ ಸಮಾಜ ಸೇವಕ ಹಾಗೂ ನಿವೃತ್ತ ಅಧಿಕಾರಿಯವರ ಸಮಾಜ ಸೇವೆ ಗುರುತಿಸಿದವರು ಹೌದ.. ಹೌದು.. ಎನ್ನುತ್ತಿದ್ದಾರೆ.
ಎನನ್ನು ಮರಳಿ ತೆಗೆದುಕೊಂಡ ಹೋಗದ ನಮಗೆ ಸಮಾಜದಿಂದ ಪಡೆದಿದ್ದನ್ನು ಮರಳಿ ಸೂಕ್ತ ರೀತಿಯಲ್ಲಿ ಸಮಾಜ ಸೇವೆಗೆ ಸಲ್ಲಿಸುವುದು ಮಹತ್ತರವಾದ ಕನಸು ನನ್ನದಾಗಿದೆ ಎನ್ನುತ್ತಾರೆ ಸಮಾಜ ಸೇವಕ ಹಾಗೂ ನಿವೃತ್ತ ಹಿರಿಯ ಅಧಿಕಾರಿ ಜೆ.ಎಂ.ಕೋರಬು..!
“ಜೆ.ಎಂ.ಕೋರಬು ಎಂಬ ಹಿರಿಯ ಅಧಿಕಾರಿ ಸಾವಿರಾರು ಕುಟುಂಬಗಳಿಗೆ ಕೊಪ್ಪಳದಲ್ಲಿ ದಾರಿ ದೀಪವಾಗಿದ್ದರು. ಅವರ ಸಹಾಯವನ್ನು ಎಂದಿಗೂ ಮರೆಯುವಂತಿಲ್ಲ.”
ಕೊಪ್ಪಳದ ಜೆ.ಎಂ.ಕೋರಬು ಅಭಿಮಾನಿಗಳ ಪರವಾಗಿ, ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು..!
– ಆನಂದಗೌಡ ಬಿ.ಮಾಲಿಪಾಟೀಲ
ಸಾ. ಬಳೂಟಗಿ, ತಾ. ಯಲಬುರ್ಗಾ.