ಕೊಪ್ಪಳ : ‘ಯೂರಿಯಾ’ ಎಂಬ ರೈತರ ಬಹು ಬೇಡಿಕೆ ಗೊಬ್ಬರದ ಬದಲಾಗಿ ‘ನ್ಯಾನೋ ಯೂರಿಯಾ’ ಎಂಬ ದ್ರಾವಕ ಅತಿ ಶೀಘ್ರದಲ್ಲಿಯೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ..!
ಸೂಕ್ತ ದರದಲ್ಲಿ ಖರೀದಿಸಲು, ಕಡಿಮೆ ಸ್ಥಳದಲ್ಲಿ ಸರಬರಾಜು ಮಾಡಲು, ಹೆಚ್ಚು ಹೆಚ್ಚು ಸಂಗ್ರಹಿಸಲು ಹಾಗೂ ಬಹು ಬೆಳೆಗಳಿಗೆ ಅತ್ಯಂತ ಪರಿಣಾಮಕಾರಿಯಾದ ಬೇವು ಯುಕ್ತ ನ್ಯಾನೋ ಯೂರಿಯಾ ಎಂಬ ರಾಸಾಯನಿಕ ದ್ರಾವಕ ಮಾರುಕಟ್ಟೆಯಲ್ಲಿ ಸದ್ಯದ ಸಾಮಾನ್ಯ ಯೂರಿಯಾಗೆ ಪೈಪೋಟಿ ನೀಡಲಿದೆ. ಅಂದುಕೊಂಡತೆ ಆದರೆ, ಇದೆ 16.06.2021 ಕ್ಕೆ ನ್ಯಾನೋ ಯೂರಿಯಾ ಎಂಬ ವಿಶಿಷ್ಠವಾದ ದ್ರಾವಕ ರೈತರ ಕೈ ಸೇರಲಿದೆ.
ಯೂರಿಯಾ ಗೊಬ್ಬರದ ಬಳಕೆಯ ದುಷ್ಪರಿಣಾಮಗಳ ನಿಯಂತ್ರಣದ ಜೊತೆಗೆ ಯೂರಿಯಾ ಕೊರತೆ ನಿಗಿಸುವ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಪರ್ಯಾಯ ಆಲೋಚನೆಗೆ ಮುಂದಾಗಿ ಇಪ್ಕೋ ಸಂಸ್ಥೆಗೆ ಜವಾಬ್ದಾರಿ ವಹಿಸಲಾಗಿತ್ತು. ಇಪ್ಕೋ ಸಂಸ್ಥೆ ನ್ಯಾನೋ ತಂತ್ರಜ್ಞಾನ ಬಳಸಿಕೊಂಡು ನ್ಯಾನೋ ಯೂರಿಯಾ (ದ್ರಾವಕ) ಅಭಿವೃದ್ಧಿಪಡಿಸಿದೆ. ಐಸಿಎಆರ್, ಎಸ್.ಎ.ಯು ಹಾಗೂ ಕೆ.ವಿ.ಕೆ ಹೀಗೆ 20 ಕ್ಕೂ ಅಧಿಕ ಸಂಸ್ಥೆಗಳ ಅವಿರತ ಸಂಶೋಧನೆಯ ಶ್ರಮದ ಫಲವಾಗಿ ನ್ಯಾನೋ ಯೂರಿಯಾ (ದ್ರಾವಕ) ಗೊಬ್ಬರ ಬೆಳಕಿಗೆ ಬಂದಿದೆ. 11000 ಕ್ಕೂ ಹೆಚ್ಚು ಸ್ಥಳಗಳಲ್ಲಿ ಹಾಗೂ 94 ಬೆಳೆಗಳ ಮೇಲೆ ನ್ಯಾನೋ ದ್ರಾವಕ ಸಿಂಪಡಣೆ ಪ್ರಯೋಗ ಕೈಗೊಳ್ಳಲಾಗಿದೆ. ಒಂದು ಬ್ಯಾಗ ಸಾಮಾನ್ಯ ಯೂರಿಯಾಗೆ, ಅರ್ಧ ಲೀಟರ್ ನ್ಯಾನೋ ಯೂರಿಯಾ ದ್ರಾವಕ ಸಮ. (ಅರ್ಧ ಲೀಟರ್) 500 ml ನ್ಯಾನೋ ಯೂರಿಯಾ ದ್ರಾವಕ 240 ರೂಪಾಯಿಗಳ ಬೆಲೆ ನಿಗದಿಯಾಗಿದೆ. ಸಾರಜನಕ ಜೊತೆಗೆ ಸಸ್ಯಗಳ ಸಮಗ್ರ ಅಭಿವೃದ್ಧಿಗೆ ನ್ಯಾನೋ ಯೂರಿಯಾ ಪೂರಕವಾಗಲಿದೆ ಎಂಬುದನ್ನು ಇಪ್ಕೋ ಸಂಸ್ಥೆ ಸ್ಪಷ್ಟಪಡಿಸಿದೆ. ಯಾವುದೇ ತರಹದ ಅಡ್ಡ ಪರಿಣಾಮವಿಲ್ಲದ ನ್ಯಾನೋ ದ್ರಾವಕದಿಂದ ಪೌಷ್ಟಿಕ ಆಹಾರ ಭದ್ರತೆ ಜೊತೆಗೆ ನೀರು, ಮಣ್ಣು ಮಾಲಿನ್ಯ ಇರುವುದಿಲ್ಲ. ಸಾಮಾನ್ಯ ಯೂರಿಯಾಗೆ ನ್ಯಾನೋ ಯೂರಿಯಾ ದ್ರಾವಕವನ್ನು ಹೋಲಿಸಿದರೆ, ಸೂಕ್ಷ್ಮ ಕಣಗಳನ್ನು ಹೊಂದಿರುವ ನ್ಯಾನೋ ಯೂರಿಯಾ ದ್ರಾವಕ (ಕಡಿಮೆ ಬೆಲೆಯಲ್ಲಿ) ಖರೀದಿಸಲು, ಖರೀದಿಸಿದ್ದನ್ನ ಸಂಗ್ರಹಿಸಲು, ಸರಬರಾಜು ಸೇರಿದಂತೆ ಬೆಳೆಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ. ಇಂತಹ ವೈಶಿಷ್ಟ್ಯತೆಯ ರಾಸಾಯನಿಕ ನ್ಯಾನೋ ದ್ರಾವಕ ಶೀಘ್ರದಲ್ಲಿಯೇ ರೈತರ ಕೈ ಸೇರಲಿದೆ.
– ಕೃಷ್ಣ ಎನ್. ಐಲಿ (ತಾವರಗೇರಾ)
[Studying MSc Agri in Soil Science and Agricultural Chemistry]