– ಶರಣಪ್ಪ ಕುಂಬಾರ.
ಕೊಪ್ಪಳ : ರೈತರಿಗೆ ಇದೊಂದು ಉಪಯೋಗಕಾರಿ ಕೀಟ. ಇದರ ವೈಜ್ಞಾನಿಕ ಹೆಸರು (Velvet Mite) ವೆಲ್ಲವೇಟ್ ಮೈಟ್. ಜಮೀನು ಬಿತ್ತನೆ ಮಾಡಲಿಕ್ಕೆ ಈಗ ಸೂಕ್ತ ಸಮಯವೆಂದು ಸೂಚನೆ ನೀಡುವುದೇ ಈ ಕೀಟದ ಒಟ್ಟಾರೆ ಜೀವನದ ಕೆಲಸ..!
ಮುಂಗಾರು ಹಂಗಾಮಿನ ರೋಹಿಣಿ ಮಳೆಯಲ್ಲಿ (ತತಿಯಲ್ಲಿ) ಜನ್ಮ ತಾಳುವ ಈ ಕೀಟ 10 ರಿಂದ 15 ದಿನಗಳ ಕಾಲ ಮಾತ್ರ ಜಮೀನಿನಲ್ಲಿ ಬದುಕುಳಿಯುತ್ತಿದೆ. ರೇಷ್ಮೆಗಿಂತಲೂ ಮೃದು ಮೈ ಹೊಂದಿರುತ್ತದೆ. ಎಂಟು ಕಾಲಗಳನ್ನು ಹೊಂದಿರುವ ಕೀಟ ಭೂಮಿಯಲ್ಲಿರುವ ಸೂಕ್ಷ್ಮ ಕ್ರೀಮಿಗಳೇ ಇದಕ್ಕೆ ಆಹಾರ. ಆಮೆ ತರಹ ಸಂಚರಿಸುವ ಕೀಟದಿಂದ ಯಾವುದೇ (ತಾಕು) ಬೆಳೆಗಳಿಗೆ ಹಾನಿ ಇಲ್ಲ ಎಂಬುದು ಗಂಗಾವತಿ ಕೆ.ವಿ.ಕೆ ಕೀಟ ಶಾಸ್ತ್ರದ ವಿಜ್ಞಾನಿ ಗುರುಪ್ರಸಾದ ಗೋತಗಿಯವರ ಅಭಿಪ್ರಾಯ.
ಹಾನಿಕಾರಕ ಕೀಟಗಳೇ ಹೆಚ್ಚಾಗಿರುವಾಗುವ ಇಂದಿನ ಕಾಲ ಮಾನದಲ್ಲಿ ಯಾವುದೇ ತರಹದ ಹಾನಿಕರವಲ್ಲದ ಕೀಟಗಳು ಅಲ್ಲದ ಹಾಗೂ ಧರೆಗೆ ಹೊನ್ನ (ಬೀಜ) ಬಿತ್ತಲು ಸೂಚನೆ ನೀಡುವ ‘ಕೃಷಿ ಪ್ರಿಯ’ ವೆಲ್ಲವೇಟ್ ಮೈಟ್ ಎಂಬ ಕೀಟಗಳಿಗೆ ನಮ್ಮದೊಂದು ಸಲಾಂ..!