– ಕೊಪ್ಪಳದಲ್ಲಿ ಕೊರೋನಾ ಕಂಟ್ರೋಲ್..!

– ಶರಣಪ್ಪ ಕುಂಬಾರ.

ಕೊಪ್ಪಳ : ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೋನಾ ವೈರಸ್ ಹರಡುವುದರಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಕಂಟ್ರೋಲ್ ಗೆ ಬಂದಿದ್ದಿಲ್ಲ.‌ ಆದರೆ, ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ ಕಿಶೋರ್ ಅವರ ಕ್ರಿಯಾಶೀಲತೆಗೆ ಸಾತ ನೀಡಿದ ಜಿಲ್ಲಾಡಳಿತದ ಅಧಿಕಾರಿಗಳ ತಂಡದ ಶ್ರಮದ ಫಲವಾಗಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡುವುದರಲ್ಲಿ ನಿಯಂತ್ರಣಕ್ಕೆ ಬಂದಿದೆ..!

 

 

ನಿತ್ಯ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಸೋಂಕಿತರನ್ನು ಗುರುತಿಸಲಾಗುತ್ತಿದ್ದ ಕೊಪ್ಪಳ ತಾಲೂಕಿನಲ್ಲಿ 14-06-2021 ರಂದು ಕೇವಲ ಒಬ್ಬರಿಗೆ ಮಾತ್ರ ಸೋಂಕು ದೃಢವಾಗಿರುವುದು ವಿಶೇಷ. ಗಂಗಾವತಿ ಅಖಂಡ ತಾಲೂಕಿನಲ್ಲಿ 35 ಜನರಿಗೆ ಸೋಂಕು ದೃಢವಾದರೆ, ತೀವ್ರವಾಗಿ ನಿಯಂತ್ರಣಕ್ಕೆ ಬಂದಿರುವ ಕುಷ್ಟಗಿ ತಾಲೂಕಿನಲ್ಲಿ 12 ಜನರಿಗೆ ಹಾಗೂ ಯಲಬುರ್ಗಾ ತಾಲ್ಲೂಕಿನಲ್ಲಿ 6 ಜನರಿಗೆ ಸೋಂಕು ದೃಢವಾಗಿರುವುದು ಸ್ಪಷ್ಟವಾಗಿದೆ. ಕೊರೋನಾ ವೈರಸ್ ಜಿಲ್ಲೆಯಲ್ಲಿ ತೀವ್ರವಾಗಿ ನಿಯಂತ್ರಣಕ್ಕೆ ಬಂದಿರುವುದನ್ನು ಗಮನಿಸಿದ ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೆ, ಜಿಲ್ಲಾಡಳಿತದ ಶ್ರಮಕ್ಕೆ ಅಭಿನಂದಿಸಿದ್ದಾರೆ..!!