ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ದೇವರು ಮೊದಲೇ ಯೋಜನೆ ರೂಪಿಸಿ ಹೆಣ್ಣು-ಗಂಡು ಸಮಾನವಾಗಿ ನೀಡಿ ಸಮತೋಲನ ಕಾಪಾಡಿರುತ್ತಾನೆ. ಹೆಣ್ಣು ಹುಟ್ಟಲಿ ಅಥವಾ ಗಂಡು ಹುಟ್ಟಲಿ ಖುಷಿಯಿಂದ ಸ್ವಾಗತಿಸಬೇಕು ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ತಜ್ಞವೈದ್ಯ ಡಾ.ಕೆ.ಎಸ್.ರೆಡ್ಡಿ ಅವರು ಹೇಳಿದರು.
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಂದೇ ಜಿಲ್ಲೆಯ ಕುಷ್ಟಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಲ್ಕನೇ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿಗೆ ಸಿಹಿ ತಿನ್ನಿಸಿ ಆಗತಾನೆ ಜನಿಸಿದ ಹೆಣ್ಣು ಮಗುವನ್ನು ಸ್ವಾಗತಿಸಿಕೊಳ್ಳುವ ಮೂಲಕ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಆಚರಿಸಿ ಮದ್ಯಾಹ್ನ ಒಂದು ಗಂಟೆ ಸುಮಾರಿಗೆ ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಒಂದು ಸಾವಿರ ಗಂಡು ಮಕ್ಕಳಿದ್ದರೆ ಒಂದು ಸಾವಿರದ ಎರಡನೂರು ಹೆಣ್ಣುಮಕ್ಕಳ ಜನನವಾಗುತ್ತಿದ್ದವು. ನೈಸರ್ಗಿಕವಾಗಿ ತಾನಾಗಿಯೇ ಸಮತೋಲನ ಕಾಪಾಡಿಕೊಂಡು ಹೋಗಲಾಗುತಿತ್ತು. ಇಂದಿನ ದಿನಮಾನಗಳಲ್ಲಿ ಗಂಡು ಮಕ್ಕಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದ್ದು, ಹೊಟ್ಟೆಯಲ್ಲಿ ಹೆಣ್ಣುಮಗುವಿನ ಪತ್ತೆಗೆ ಸ್ಕ್ಯಾನ್ ಮಾಡಿಸಿ ಅಬಾಷನ್ ಮಾಡಿಸಿ ಹೆಣ್ಣು ಮಗು ಹುಟ್ಟದಹಾಗೆ ಮಾಡುತಿದ್ದಾರೆ. ಇದರಿಂದ ನೈಸರ್ಗಿಕ ಸಮತೋಲನ ತಪ್ಪುತ್ತಿದೆ. ಇದು ಹಾಗಾಗಬಾರದು ಹೆಣ್ಣು ಗಂಡು ಸಮಾನವಾಗಿ ದೇವರು ಯೋಜನೆ ರೂಪಿಸಿ ಸಮತೋಲನ ಕಾಪಾಡಿರುತ್ತಾನೆ. ಹೆಣ್ಣು-ಗಂಡು ನಮ್ಮ ಕೈಯಲ್ಲಿಲ್ಲ. ಅದು ದೇವರ ಸೃಷ್ಠಿಯಾಗಿದೆ. ಹೆಣ್ಣು ಹುಟ್ಟಲಿ ಗಂಡು ಹುಟ್ಟಲಿ ಖುಷಿಯಿಂದ ಸ್ವಾಗತಿಸಬೇಕು ಎಂದ ತಜ್ಞವೈದ್ಯ ಡಾ.ಕೆ.ಎಸ್. ರೆಡ್ಡಿ ಅವರು, ಹೆಣ್ಣು ಮಕ್ಕಳು ಸಮಾಜದಲ್ಲಿ ಎದುರಿಸುತ್ತಿರುವ ತಾರತಮ್ಯದ ಬಗೆಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಪ್ರತಿ ವರ್ಷ ಜನವರಿ 24ನೇ ದಿನವನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವೆಂದು. ಸರಕಾರ ಆಚರಣೆಗೆ ತಂದಿದೆ ಎಂದು ಹೇಳಿದರು.
ಈ ವೇಳೆ ಮಕ್ಕಳ ತಜ್ಞ ಡಾ.ಮಹಾಂತೇಶ ಮಾಲಿಪಾಟೀಲ, ಡಾ.ಚಂದ್ರಕಲಾ, ಕ್ಷಯರೋಗ ತಪಾಸಣಾ ಕೇಂದ್ರದ ಸಮಾಲೋಚಕಿ ಶೋಭಾ ಸೇರಿದಂತೆ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ತಾಯಂದಿರು ಇದ್ದರು.
ಇಂದಿನ ದಿನಮಾನಗಳಲ್ಲಿ ಗಂಡು ಮಕ್ಕಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದ್ದು, ಹೊಟ್ಟೆಯಲ್ಲಿ ಹೆಣ್ಣುಮಗುವಿನ ಪತ್ತೆಗೆ ಸ್ಕ್ಯಾನ್, ಅಬಾಷನ್ ಮಾಡಿಸಿ ಹೆಣ್ಣು ಮಗು ಹುಟ್ಟದಹಾಗೆ ಮಾಡುತಿದ್ದಾರೆ. ಇದರಿಂದ ನೈಸರ್ಗಿಕ ಸಮತೋಲನ ತಪ್ಪುತ್ತಿದೆ. ಹಾಗಾಗಬಾರದು ಹೆಣ್ಣು ಗಂಡು ಸಮಾನವಾಗಿ ಹುಟ್ಟಿಸಿ ದೇವರು ಸಮತೋಲನ ಕಾಪಾಡಿರುತ್ತಾನೆ. ಹೆಣ್ಣು-ಗಂಡು ನಮ್ಮ ಕೈಯಲ್ಲಿಲ್ಲ. ಅದು ದೇವರ ಸೃಷ್ಠಿಯಾಗಿದೆ. ಹೆಣ್ಣು ಹುಟ್ಟಲಿ ಗಂಡು ಹುಟ್ಟಲಿ ಖುಷಿಯಿಂದ ಸ್ವಾಗತಿಸಬೇಕು
– ತಜ್ಞವೈದ್ಯ ಡಾ. ಕೆ.ಎಸ್. ರೆಡ್ಡಿ ಆಡಳಿತಾಧಿಕಾರಿ, ಸಾರ್ವಜನಿಕ ಆಸ್ಪತ್ರೆ, ಕುಷ್ಟಗಿ.