– ಶರಣಪ್ಪ ಕುಂಬಾರ.
ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದ ಹೃದಯ ಭಾಗದಲ್ಲಿರುವ ಮಹಾವೀರ ಕ್ಲಾಥ ಸ್ಟೋರ್ ಕಟ್ಟಡವು ರಸ್ತೆ ಅತಿಕ್ರಮಣದಿಂದ ಕೂಡಿದೆ. ಕೂಡಲೇ ಅತಿಕ್ರಮಣವಾಗಿರುವ ಕಟ್ಟಡವನ್ನು ಕೂಡಲೇ ತೆರವುಗೊಳಿಸಬೇಕೆಂದು ರಸ್ತೆ ಬದಿ ವ್ಯಾಪಾರಿ ಶರಣಪ್ಪ ಎನ್. ತೆಗ್ಗಿಹಾಳ ಪುರಸಭೆ ಮುಂದೆ ಏಕಾಂಗಿಯಾಗಿ ಪ್ರತಿಭಟಿಸಿದ ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ..!
ಅಭಿನಂದನ ಪಾರ್ಶ್ವನಾಥ ಗೋಗಿ ಎಂಬುವರಿಗೆ ಸೇರಿದ ಮಹಾವೀರ ಕ್ಲಾಥ ಸ್ಟೋರ್ಸ್ ಕುಷ್ಟಗಿ ಪಟ್ಟಣದಿಂದ ಗಜೇಂದ್ರಗಡ ರಸ್ತೆಗಿರುವ ವೃತ್ತದಲ್ಲಿದೆ. ಈ ಕಟ್ಟಡವನ್ನು ರಸ್ತೆ ಅತಿಕ್ರಮಣದಿಂದ ಕೂಡಿದ್ದಾಗಿದೆ ಎಂದು ರಸ್ತೆ ಬದಿ ವ್ಯಾಪಾರಸ್ಥನ ಆರೋಪವಾಗಿದೆ.
ಈ ಹಿಂದೆ ಕಟ್ಟಡವು ರಸ್ತೆ ಅಕ್ರಮಣದಿಂದ ಕೂಡಿದ್ದಾಗಿರುತ್ತದೆ ಎಂದು AC ಸೇರಿದಂತೆ DC ಯವರಿಗೆ ರಸ್ತೆ ಬದಿ ವ್ಯಾಪಾರಿ ಶರಣಪ್ಪ ಎನ್ ತೆಗ್ಗಿಹಾಳ ಪತ್ರದ ಮೂಲಕ ಮನವಿಮಾಡಿಕೊಂಡು ಕಟ್ಟಡ ತೆರವಿಗೆ ಒತ್ತಾಯಿಸಿದ್ದಾನೆ. ಅಲ್ಲದೆ, ಹಲವು ಬಾರಿ ಸ್ಥಳೀಯ ಪುರಸಭೆ ಹಾಗೂ ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಗೆ ಒತ್ತಾಯಪಡಿಸಿದ್ದಾನೆ. ಯಾವುದರಿಂದ ಕೂಡಾ ನ್ಯಾಯ ದೊರಕದ ಹಿನ್ನಲೆಯಲ್ಲಿ ದಿನಾಂಕ 07–07-2021 ರಂದು ಕುಷ್ಟಗಿ ಪುರಸಭೆ ಕಾರ್ಯಾಲಯ ಮುಂದೆ ರಸ್ತೆ ಬದಿ ವ್ಯಾಪಾರಿ ಶರಣಪ್ಪ ಎನ್. ತೆಗ್ಗಿಹಾಳ ಪ್ರತಿಭಟನೆಗೆ ಮುಂದಾಗಿದ್ದಾನೆ. ಪ್ರತಿಭಟನಾ ಸ್ಥಳಕ್ಕೆ ಪುರಸಭಾ ಅಧ್ಯಕ್ಷ ಜಿ.ಕೆ.ಹಿರೇಮಠ ಸೇರಿದಂತೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ಭೇಟಿ ನೀಡಿದ್ದಾರೆ. ಬಳಿಕ ಪುರಸಭೆ ಮುಖ್ಯಾಧಿಕಾರಿ ಉಮೇಶ ಹಿರೇಮಠ ಅಕ್ರಮ ಕಟ್ಟಡ ತೆರವುಗೊಳಿಸುವ ಭರವಸೆ ಪತ್ರವನ್ನು ನೀಡಿದಾಗ ಶರಣಪ್ಪ ಎನ್. ತೆಗ್ಗಿಹಾಳ ಪ್ರತಿಭಟನೆ ಹಿಂದೆ ಪಡೆದಿದ್ದಾನೆ.