ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದ ಬನಶಂಕರಿ ಆಸ್ಪತ್ರೆಯಲ್ಲಿ ಭಾನುವಾರ ಮದ್ಯಾಹ್ನ 12 ಗಂಟೆ ಸುಮಾರಿಗೆ ಬೆಂಗಳೂರಿನ I.V. F. ಆಸೇಸ್ಸ್ ಫರ್ಟಿಲಿಟಿ ಆಸ್ಪತ್ರೆಯ ಹಾಗೂ ಇನ್ನರ್ ವೀಲ್ ಕ್ಲಬ್ ವತಿಯಿಂದ ಉಚಿತ ಬಂಜೆತನ ತಪಾಸಣೆ ಮತ್ತು ಸಲಹಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೊಂದು ಶಿಬಿರವನ್ನು I.V. F. ಆಸೇಸ್ಸ್ ಫರ್ಟಿಲಿಟಿ ಆಸ್ಪತ್ರೆಯ ಡಾ.ರೇಖಾ ಕೆ. ವಿ. ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿ, ಬಂಜೆತನ ಪುರುಷರಿಗೂ, ಮಹಿಳೆಯರಿಗೂ ಇರಬಹುದು. ನಿರಂತರ ಗರ್ಭನಿರೋಧಕ ಮಾತ್ರೆಗಳ ಸೇವನೆ ಕೂಡ ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುವುದು. ಪುರುಷರು ಹಾಗೂ ಮಹಿಳೆಯರು ಬಂಜೆತನಕ್ಕೆ ಸಮಾನ ಕಾರಣರಾಗಿರುವರು ಅದನ್ನು ವೈದ್ಯರ ಸಲಹೆ ಮೇರೆಗೆ ಸಮಾಲೋಚನೆ ನಡೆಸಿ ತಪಾಸಣೆ ನೀಡಿದರೆ ಖಂಡಿತಾ ಮಕ್ಕಳ ಭಾಗ್ಯ ದೊರಕಲಿದೆ ಎಂದು ತಿಳಿಸಿದರು.
ಬನಶಂಕರಿ ಆಸ್ಪತ್ರೆಯ ಡಾ.ಪಾರ್ವತಿ ಪಳೋಟಿ, ಡಾ.ಮಲ್ಲಪ್ಪ ಪಳೋಟಿ ಹಾಗೂ I.V. F. ಆಸೇಸ್ಸ್ ಫರ್ಟಿಲಿಟಿ ಆಸ್ಪತ್ರೆಯ ಡಾ.ರೇಖಾ ಕೆ. ವಿ. ಅವರ ನೇತೃತ್ವದಲ್ಲಿ ನಡೆದ ಇ ಈ ವೊಂದು ಶಿಬಿರಕ್ಕೆ ಆಗಮಿಸಿದ್ದ ಮಕ್ಕಳಾಗದೆ ಇರುವ ದಂಪತಿಗಳೊಂದಿಗೆ ಆಪ್ತ ಸಮಾಲೋಚನೆ ಹಾಗೂ ತಪಾಸಣೆ ನಡೆಸಲಾಯಿತು. 120 ದಂಪತಿಗಳಿಗೆ ಉಚಿತ ಬಂಜೆತನ ತಪಾಸಣೆ ನೀಡಲಾಯಿತು.
ಇನ್ನರ್ ವೀಲ್ ಅಧ್ಯಕ್ಷೆ ಶಾರದಾ ಶೆಟ್ಟರ್. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಇನ್ನರ್ ವೀಲ್ ಕ್ಲಬ್ ಇಲ್ಲಿಯವರೆಗೂ ಕೈಗೊಂಡ ಉಚಿತ ಆರೋಗ್ಯ ತಪಾಸಣೆ ಹಾಗೂ ಇತರೆ ಸಮಾಜಿಕ ಚೆಟುವಟಿಕೆಗಳ ಕುರಿತು ಪ್ರಾಸ್ತಾವಿಕ ಮಾತನಾಡಿದರು.
ಬನಶಂಕರಿ ಆಸ್ಪತ್ರೆಯ ಸಿಬ್ಬಂದಿ ಹನುಮೇಶ್ ಸಿಳ್ಳಿ ಹಾಗೂ IVF ಅಸ್ಸೇಸ್ ಆಸ್ಪತ್ರೆ ಸಿಬ್ಬಂದಿ ಅವರು ಉಪಸ್ಥಿತರಿದ್ದರು.
ಶರಣ ಬಸವ ನಿರೂಪಿಸಿದರು. ಡಾ.ಕುಮುದಾ ಪಲ್ಲೆದ ಸ್ವಾಗತಿಸಿದರು. ಪ್ರಭಾ ಬಂಗಾರ ಶೆಟ್ಟರ ವಂದಿಸಿದರು.