ಕುಷ್ಟಗಿ ಸರ್ಕಾರಿ ಪದವಿ ಕಾಲೇಜಿಗೆ ನ್ಯಾಕ್ ‘ಬಿ’ ಗ್ರೇಡ್ ಮಾನ್ಯತೆ

ಮುನೇತ್ರ
ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಜಿಲ್ಲೆಯ ಕುಷ್ಟಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನ್ಯಾಕ್ (ನ್ಯಾಷನಲ್ ಅಸಿಸ್‌ಮೆಂಟ್ ಅಂಡ್ ಅಕ್ರಿಡೇಷನ್ ಕೌನ್ಸಿಲ್)ನಿಂದ 2ನೇ ಆವೃತ್ತಿಯ ಮರುಮೌಲ್ಯಮಾಪನ ಪ್ರಕ್ರಿಯೆಯಲ್ಲಿ 2.42 ಸಿಜಿಪಿಎ ಅಂಕಗಳೊಂದಿಗೆ ‘ಬಿ’ ಗ್ರೇಡ್ ಮಾನ್ಯತೆ ಪಡೆದಿದೆ.

ನ್ಯಾಕ್ ಪೀರ್ ಸಮಿತಿಯ ಅಧ್ಯಕ್ಷ ಡಾ.ಇಂದ್ರವರ್ಧನ ತ್ರಿವೇದಿ, ಕೋಆರ್ಡಿನೇಟರ್ ಪ್ರೊ. ಡಾ.ಜಯಪ್ರಕಾಶ್ ತ್ರಿವೇದಿ, ಸದಸ್ಯ ಡಾ.ವಸಂತ್ ಸನಪ್ ಅವರನ್ನು ಒಳಗೊಂಡ ತಂಡ ಫೆ.28ರಿಂದ 29ರವರೆಗೆ ಕಾಲೇಜಿಗೆ ಭೇಟಿ ನೀಡಿತ್ತು. ಕಾಲೇಜಿನಲ್ಲಿರುವ ವ್ಯವಸ್ಥೆಗಳ ಕುರಿತು ಮೆಚ್ಚುಗೆ ಸೂಚಿಸಿತ್ತು ಎಂದು ತಿಳಿಸಿರುವ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ವ್ಹಿ.ಡಾಣಿ ಅವರು ತಿಳಿಸಿದ್ದಾರೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಬಿ ಗ್ರೇಡ್ ಲಭಿಸಿರುವುದಕ್ಕೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಾಸಕರು ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಹಾಗೂ ಗಣ್ಯರು ಸೇರಿದಂತೆ ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.