ಕೊಪ್ಪಳ ಜಿಲ್ಲಾ ಬಿಜೆಪಿ ಯುವ ಮೋರ್ಚಾ ನೂತನ ಕಾರ್ಯದರ್ಶಿಯಾಗಿ ಅರ್ಜುನ್ ಗುಗ್ಗರಿ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಬಿಜೆಪಿ ಜಿಲ್ಲಾ ಯುವ ಮೋರ್ಚಾದ ನೂತನ ಕಾರ್ಯದರ್ಶಿಯನ್ನಾಗಿ ಕುಷ್ಟಗಿ ತಾಲೂಕಿನ ಕೊರಡಕೇರಾ ಗ್ರಾಮದ ಅರ್ಜುನ್ ಗುಗ್ಗರಿ ಅವರನ್ನು ನೇಮಕ ಮಾಡಲಾಗಿದೆ.

ಈ ಕುರಿತು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ
ಮೌನೇಶ ದಢೇಸೂಗೂರು ಅವರು ಜಿಲ್ಲಾಧ್ಯಕ್ಷ ನವೀನಕುಮಾರ್ ಈ ಗುಳಗಣ್ಣವರ ಸೂಚನೆಯ ಮೇರೆಗೆ ಇವರನ್ನು ನಿಯುಕ್ತಿಗೊಳಿಸಿ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಸಿದ್ದಾರೆ.

ಕುಷ್ಟಗಿ ತಾಲೂಕು ಹಿಂದೂ ಪರ ಸಂಘಟನೆಯ ಪ್ರಮುಖರಾದ ಅರ್ಜುನ್ ಗುಗ್ಗರಿ ಅವರು ನೂತನವಾಗಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವದಕ್ಕೆ ಬಿಜೆಪಿ ಸಂಸದರು, ಮುಖಂಡರು, ಕಾರ್ಯಕರ್ತರು, ಯುವ ಮೋರ್ಚಾ ತಾಲೂಕು ಘಟಕಗಳ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.