ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದ ಲೋಕೋಪಯೋಗಿ ಇಲಾಖೆಯ ಆವರಣದಲ್ಲಿನ ವಾಹನಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಏ.6ಶನಿವಾರ ಬೆಳಿಗ್ಗೆ ನಡೆದಿದೆ.
ಸ್ಕ್ರ್ಯಾಪ್’ಗೆ ಸೇರಿದ ಟಿಪ್ಪರ್, ಜೀಪ್ ಸೇರಿದಂತೆ ರೂಲರ್’ಗಳು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದ್ದು, ವಾಹನದ ಚಕ್ರಗಳ ಟಾಯರಗಳು ಸುಟ್ಟು ಬೂದಿಯಾಗಿವೆ. ಎಲ್ ಟಿ ವಿದ್ಯುತ್ ಲೈನ್ ಕೆಳಗಡೆ ಬೆಂಕಿ ಹತ್ತಿ ಉರಿಯುತ್ತಿರುವುದನ್ನು ಗಮನಿಸಿದ ಜೆಸ್ಕಾಂ ಇಲಾಖೆ ನೌಕರ ಲೈನಮ್ಯಾನ್ ಆನಂದ ಎಂಬುವರು ತಕ್ಷಣ ಇಲಾಖೆಗೆ ವಿದ್ಯುತ್ ಸಂಚಾರ ಕಡಿತ ಗೊಳಿಸಲು ತಿಳಿಸಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದಾವಿಸಿದ ಪಾಯರ್ ಮ್ಯಾನಗಳು ಅಗ್ನಿ ನಂದಿಸಿದ್ದಾರೆ. ಲೋಕೋಪಯೋಗಿ ಇಲಾಖೆಯ ಪಕ್ಕದಲ್ಲಿ ತಾಲೂಕು ಪಂಚಾಯಿತಿ ಕಟ್ಟಡಗಳು ಹಾಗೂ ವಾಣಿಜ್ಯ ಮಳಿಗೆಗಳಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಮುಂದೆ ಸಂಭವಿಸಬಹುದಾದ ಅನಾಹುತ ತಪ್ಪಿಸಿದ್ದಾರೆ. ಸುಮಾರು 01 ಲಕ್ಷ ರೂಪಾಯಿ ಹಾನಿಯಾಗಿದೆ ಎಂದು ವರದಿ ಮಾಡಿಕೊಂಡಿರುವ ಪಾಯರ್ ಅಧಿಕಾರಿಗಳು, ಯಾರೋ ಬೀಡಿ, ಸಿಗರೇಟು ಸೇದಿ ಎಸೆದ ಪರಿಣಾಮ ಒಣಗಿದ ಕಸಕಡ್ಡಿಗೆ ಕಿಡಿ ತಗುಲಿ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ಶಂಕಿಸಿದ್ದಾರೆ.