ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇ ಮುಖರ್ತಿನಾಳ ಗ್ರಾಮದ ಜಮೀನೊಂದರಲ್ಲಿ ಮೆಣಸಿನಕಾಯಿ ಬೀಜೋತ್ಪಾದನೆಗೆ ಇಡಲಾಗಿದ್ದ ಬೆಲೆ ಬಾಳುವ ಮೆಶ್ ಹಾಗೂ ಬಲೀಸ್’ಗಳನ್ನು ಯಾರೋ ದುಷ್ಕರ್ಮಿಗಳು ಬೆಂಕಿಹಚ್ಚಿ ಸುಟ್ಟು ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ರೈತ ಯಮನೂರಪ್ಪ ಕೊಡಗಲಿ ಎಂಬುವರು ತಮ್ಮ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದು ಬೀಜೋತ್ಪಾದನೆಗಾಗಿ ಎರಡು ಮೆಶ್ ನಿರ್ಮಿಸಲು ಸುಮಾರು ಒಂದುವರೆ ಲಕ್ಷ ರೂಪಾಯಿ ಬೆಲೆ ಬಾಳುವ ಪರದೆ ಹಾಗೂ ಬಲೀಸ್’ಗಳನ್ನು ತಂದು ಇರಿಸಿದ್ದರು. ಗುರುವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಯಾರೋ ಕಿಡಿಗೇಡಿಗಳು ಬೆಂಕಿಯಿಟ್ಟ ಪರಿಣಾಮ ಸುಟ್ಟು ಭಸ್ಮವಾಗಿದೆ. ಬರಗಾಲದ ಈ ಸಂದರ್ಭದಲ್ಲಿ ಬೆಲೆ ಬಾಳುವ ಮೆಶ್ ಕಳೆದುಕೊಂಡ ರೈತ ಕಂಗಾಲಾಗಿದ್ದಾನೆ. ಈ ಘಟನೆ ಕುರಿತು ತಾವರಗೇರಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ರೈತನ ಕುಟುಂಬ ಮೂಲಗಳು ಶನಿವಾರ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.