ಗ್ರಾಮದೇವತೆ ಜಾತ್ರೆ : ಮುಸ್ಲಿಂ ಬಾಂಧವರಿಂದ ಸಿಹಿ ವಿತರಣೆ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕುಷ್ಟಗಿ : ಪಟ್ಟಣದ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ಜಾತ್ರಾಮಹೋತ್ಸವ ಪ್ರಯುಕ್ತ ನಾಡಿಗೆ ಮಳೆ, ಬೆಳೆ ಸಮೃದ್ದಿಗಾಗಿ ಕೈಗೊಂಡಿರುವ ನಿರಂತರ ಸಪ್ತ ಭಜನೆ ತಂಡದವರಿಗೆ ಮುಸ್ಲಿಂ ಬಾಂಧವರು ಭಾನುವಾರ ಸಿಹಿ ಖಾದ್ಯ, ಪಾಯಸ ವಿತರಿಸಿದರು.

ಕಳೆದ ಆರುವರೆ ದಶಕಗಳಿಂದ ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಗ್ರಾಮದೇವತೆ ಜಾತ್ರೆಯನ್ನು ಪಟ್ಟಣದಲ್ಲಿ ಜಾತಿ, ಮತ, ಧರ್ಮ ಬೇಧಭಾವವಿಲ್ಲದೇ ಸರ್ವ ಸಮುದಾಯ ಬಾಂಧವರು ಒಗ್ಗೂಡಿ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಇದರ ಉಸ್ತುವಾರಿ ಸಮಿತಿ ರಚಿಸಿ ದಿನಂಪ್ರತಿ ಮಹಾದಾಸೋಹ ಕೈಗೊಂಡಿದ್ದಾರೆ. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಭಜನಾ ತಂಡ ನಾಡಿಗೆ ಮಳೆ, ಬೆಳೆ ಸಮೃದ್ಧವಾಗಿ ಆಗಲಿ ಎಂದು ಅಮ್ಮನ ದೇವಸ್ಥಾನ ಎದರಿಗೆ ಶಿವನಾಮ ಸ್ಮರಣೆಯೊಂದಿಗೆ ಹಗಲು ರಾತ್ರಿ ಸಪ್ತ ಭಜನೆ ಕೈಗೊಂಡಿದ್ದಾರೆ. ಭಜನಾ ನಿರತ ತಂಡಗಳಿಗೆ ಗ್ರಾಮದೇವಿ ಜಾತ್ರಾ ಮಹೋತ್ಸವ ಸಮಿತಿ ಉಪಾಧ್ಯಕ್ಷ ಸೈಯದ್ ಅಮೀನುದ್ದೀನ್ ಮುಲ್ಲಾ, ಖಜಾಂಚಿ ಇಮಾಮ್ ಮುಲ್ಲಾ ನೇತೃತ್ವದಲ್ಲಿ ಮುಸ್ಲಿಂ ಬಾಂಧವರು ಸುರುಕುರ್ಮ, ಶ್ಯಾವಿಗೆ ಪಾಯಸವನ್ನು ವಿತರಿಸುವ ಮೂಲಕ ಸಂತುಷ್ಠರಾದರು.

ಈ ವೇಳೆ ಮುಸ್ಲಿಂ ಸಮಾಜದ ಹಿರಿಯರಾದ ಹಾಜಿ ಶೇಕ್ ಜಾವೆದ ಹುಸೇನ್ ಡಾಕ್ಟರ್ ಬಾಬು, ಸೈಯದ್ ಅನ್ವರ್ ಅತ್ತಾರ್, ಮಹಿಬೂಬಲ್ಲಿ ಸರ್ಪಂಚ್, ಮಾಜಿ ಪುರಸಭೆ ಸದಸ್ಯರಾದ ಫಾತಿಮಾ ಗುಮಗೇರಿ, ನೂರು ಜಾನ ಅತ್ತಾರ ಹಾಗೂ ಶೇಕ್ ಸುಭಾನಿ ಗೋನಾಳ್, ರಫೀಕ್ ರಗ್ಜಿನ, ಹುಸೇನ್ ಗೌಡ್ರು, ರಾಜಾಸಾಬ್ ಕಿಡದೂರ್, ಮೈಬುಸಾಬ್ ಗುಮಗೇರಿ ಸೇರಿದಂತೆ ಇತರರಿದ್ದರು.