ಶಂಕ್ರಪ್ಪ ಬನ್ನಿಗೋಳ ಇನ್ನಿಲ್ಲ

ಕೃಷಿಪ್ರಿಯ ನ್ಯೂಸ್ |

ಕುಷ್ಟಗಿ : ಪಟ್ಟಣದ 5ನೇ ವಾರ್ಡಿನ ವಿದ್ಯಾನಗರದ ನಿವಾಸಿ ಹಾಲುಮತ ಸಮಾಜದ ಯುವಕ ಶಂಕ್ರಪ್ಪ ತಂ. ಸೋಮಪ್ಪ ಬನ್ನಿಗೋಳ (40) ಏ.17 ಬುಧವಾರ ಸಂಜೆ ನಿಧನರಾದರು.

ಮೃತರು, ಪತ್ನಿ, ಮೂರು ಜನ ಪುತ್ರರು ಸೇರಿದಂತೆ ಅಪಾರ ಬಂಧು-ಬಳಗ ಸ್ನೇಹಿತರನ್ನು ಅಗಲಿದ್ದಾರೆ. ಗುರುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಗಜೇಂದ್ರಗಡ ರಸ್ತೆಯ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತ ಶಂಕ್ರಪ್ಪ ಬನ್ನಿಗೋಳ ಜನಶ್ರೀ ಪತ್ತಿನ ಸಹಕಾರ ನಿಯಮಿತ ಸಂಘದ ಮೆನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಪತ್ತಿನ ಸಹಕಾರ ನಿಯಮಿತ ಸಂಘದವರು, ಜನಪ್ರತಿನಿಧಿಗಳು ಪಟ್ಟಣದ ಜನತೆ ಕಂಬನಿ ಮಿಡಿದಿದ್ದಾರೆ.