ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ವಿಶ್ವಗುರು ಮೋದಿ ದೇವರಂತೆ ಎಂಪಿಗಳೆಲ್ಲ ಪೂಜಾರಿಗಳಂತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಜಿಲ್ಲೆಯ ಕುಷ್ಟಗಿ ತಾಲೂಕಿನ ಕೊರಡಕೇರಾ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ತಳುವಗೇರಾ ಗ್ರಾಮದಲ್ಲಿ ಏ.18 ಗುರುವಾರ ದಿನ ಕೊಪ್ಪಳ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಪರ ಮತಯಾಚನೆ ಸಭೆಯಲ್ಲಿ ಭಾಗವಹಿಸಿ ಅವರು ವ್ಯಂಗ್ಯವಾಡಿದರು.
ಬಿಜೆಪಿ ಅಧಿಕಾರಕ್ಕೆ ಬಂದ 100 ದಿನಗಳೊಳಗೆ ಪೆಟ್ರೋಲ್, ಡಿಸೇಲ್ ಬೆಲೆ ಅರ್ಧದಷ್ಟು ಕಡಿಮೇ ಮಾಡುತ್ತೇನೆ ಅವಕಾಶ ನೀಡಿ ಎಂದು ಭಾಷಣ ಮಾಡಿದ ಮೋದಿ, ಏನೂ ಮಾಡಲಿಲ್ಲ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರಲ್ ಬೆಲೆ 116 ಡಾಲರ್ ಇದ್ದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಲೀಟರಗೆ ₹56 ಕ್ಕೆ ಡಿಸೇಲ್ ಕೊಡಲಾಗುತಿತ್ತು. ಸಧ್ಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರಲ್ ಬೆಲೆ 83 ಡಾಲರ್ ಇದೆ. ಆದರೆ, ಬಿಜೆಪಿ ಡಿಸೇಲ್ ಬೆಲೆ ಕಡಿಮೆ ಮಾಡಿದೆಯೇ, ಜಿಡಿಪಿ ಬೆಲೆ, ದೇಶದ ಆರ್ಥಿಕತೆ ಏನಾಗಿದೆ ಎದು ಪ್ರಶ್ನಿಸಿದ ತಂಗಡಗಿ,. ಈ ಭಾಗದ ರೈತರಿಗೆ, ಯುವಕರಿಗೆ, ಕಾರ್ಮಿಕರಿಗೆ ಏನು ಕೊಡುಗೆ ನೀಡದ ಬಿಜೆಪಿಯವರಿಗೆ ಮಾತಿನ್ಯಾಗ ಮಾತಿಲ್ಲ, ಅವರಿಗೇನು ಕೆಲಸವಿಲ್ಲ ಎಂದು ಕುಟುಕಿದರು.
ಬಿಜೆಪಿಗರು ವಿಶ್ವಗುರು ಮೋದಿ ಅನ್ನುತ್ತಿದ್ದು, ಯಾವುದರಲ್ಲಿ ವಿಶ್ವಗುರು ಆಗಿದ್ದಾರೆ, ಸುಳ್ಳು ಹೇಳುವುದರಲ್ಲಿ ಮೋದಿ ವಿಶ್ವಗುರು ಆಗಿದ್ದಾರೆ ಎಂದು ವ್ಯಂಗ್ಯವಾಡಿದರು. ವಿದೇಶದ ಪ್ರಧಾನಿಗಳು ಮೋದಿಮಾತು ಕೇಳುತ್ತಾರೆ ಎಂದು ಹೇಳುತ್ತಾರೆ. ಆದರೆ, ದೆಹಲಿಯಲ್ಲಿ ವಿವಿಧ ರಾಜ್ಯಗಳ ರೈತರು ಪ್ರತಿಭಟನೆ ನಡೆಸುತಿದ್ದರೆ ದೇಶದ ಪ್ರಧಾನಿ ಸೌಜನ್ಯಕ್ಕಾದರೂ ರೈತರ ಕಷ್ಟ, ಸಮಸ್ಯೆ ಕೇಳಲು ಬಿಜೆಪಿಗೆ ಮಾತು ಬರುತ್ತಿಲ್ಲ. ವಿಶ್ವಗುರು ಮೋದಿ ದೇವರಂತೆ ಎಂಪಿಗಳೆಲ್ಲ ಪೂಜಾರಿಗಳಂತೆ ಎಂದು ವ್ಯಗ್ಯವಾಡಿದ ಸಚಿವ ತಂಗಡಗಿ ಈ ಭಾಗದ ಈ ದೇಶದ ಜನರು ಬುದ್ದಿವಂತರಾಗಿದ್ದು, ಅಮರೇಗೌಡ ಪಾಟೀಲ್ ಬಯ್ಯಾಪೂರು ಹಾಗೂ ಸಂಗಣ್ಣ ಕರಡಿ ಅವರ ಸ್ವಾಭಿಮಾನವನ್ನು ಈ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜಶೇಖರ ಹಿಟ್ನಾಳ ಅವರಿಗೆ ಅತಿಹೆಚ್ಚು ಮತ ಚಲಾಯಿಸುವ ಮೂಲಕ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲಗೆ ತೋರಿಸಬೇಕು ಎಂದು ಮತದಾರರಿಗೆ ಕರೆ ನೀಡಿದರು.
ಕೊಪ್ಪಳದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯ ಭಾಷಣ ಕೇಳುತಿದ್ದೆ. ಸಿಟಿ ರವಿ ಮೋದಿ ಹೆಸರೇಳಿ ಅಬಕೀ ಬಾರ್ ಮೋದಿ ಎಂದರು. ಅದಕ್ಕೆ ನಾನೇಳಿದೆ ಅಬಕೀ ಬಾರ್ ಮೋದಿ ಅಲ್ಲ ಅಬಕೀ ಬಾರ್ ಚೋಕೋಬಾರ ಐಸ್ ಕ್ರೀಮ್ ಕೊಟ್ಟು ಆಕಡೆ ಕೂಡಿಸೋದು.
– ಶಿವರಾಜ ತಂಗಡಗಿ
ಉಸ್ತುವಾರಿ ಸಚಿವರು, ಕೊಪ್ಪಳ.