ಜೂಲಕಟ್ಟಿ ಬಳಿ ಸಿಡಿಲಿಗೆ ಓರ್ವ ಸಾವು

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಸಿಡಿಲು ಬಡಿದು ಸ್ಥಳದಲ್ಲೇ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಜೂಲಕಟ್ಟಿ ಗ್ರಾಮದ ಬಳಿ ಏ.18 ಗುರುವಾರ ಮದ್ಯಾಹ್ನ ನಡೆದಿದೆ.

ತಾಲೂಕಿನ ಕೊರಡಕೇರಾ ಗ್ರಾಮದ ಅಮೋಘಸಿದ್ದಯ್ಯ ಶಿವಲಿಂಗಯ್ಯ ಗುರುವಿನ (32) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಜೂಲಕಟ್ಟಿ ಗ್ರಾಮ ಸೀಮಾದ ಜಮೀನಿನಲ್ಲಿ ಈ ಘಟನೆ ಸಂಭವಿಸಿದೆ. ಕೊರಡಕೇರಾ ಗ್ರಾಮದಿಂದ ಎಂಟು ಜನ ಕೂಲಿ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಮದ್ಯಾಹ್ನ 3.30ರ ಸುಮಾರಿಗೆ ಬಿರುಗಾಳಿ ಗುಡುಗು ಸಹಿತ ಮಳೆ ಆರಂಭವಾಗಿದೆ. ಮರದ ಆಸರೆ ಬಯಸಿ ತೆರಳುವ ಸಂದರ್ಭದಲ್ಲಿ ಸಿಡಿಲು ಬಡಿದಿದ್ದು, ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೋರ್ವನ ಕೈಗೆ ಪೆಟ್ಟಾಗಿದೆ ಇನ್ನಿತರರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಸಾರ್ವಜನಿಕರಿಂದ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಕಾರ್ಯ ಕೈಗೊಂಡಿದ್ದಾರೆ.