ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಪುರಸಭೆ ಸಿಬ್ಬಂದಿಯೋರ್ವ ವಿದ್ಯುತ್ ಬೀದಿ ದೀಪ ಅಳವಡಿಸುತ್ತಿರುವ ವೇಳೆ ಕ್ರೇನ್ ಮೇಲಿಂದ ಆಯತಪ್ಪಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಶುಕ್ರವಾರ ಮದ್ಯಾಹ್ನ ನಡೆದಿದೆ.
ಪುರಸಭೆ ನೌಕರದಾರ ನಾಗಪ್ಪ ಎಂಬುವರು ಗಂಭೀರ ಗಾಯಗೊಂಡ ವ್ಯಕ್ತಿ. ಪಟ್ಟಣದಲ್ಲಿ ಶ್ರೀ ದ್ಯಾಮವ್ವದೇವಿ ಜಾತ್ರೆ ಹಿನ್ನೆಲೆ ಬಸವೇಶ್ವರ ವೃತ್ತದ ಬಳಿಯ ನ್ಯಾಯಾಲಯದ ಎದುರುಗಡೆ ಇರುವ ಮುಖ್ಯರಸ್ತೆಯ ಕಂಬದಲ್ಲಿ ಲೈಟ್ ಕಟ್ಟಲು ಹೋಗಿ ಕ್ರೇನ್ ಮೇಲಿಂದ ಬಿದ್ದು ಎಡಗಾಲಿಗೆ ಬಲವಾದ ರಕ್ತಗಾಯವಾಗಿದೆ. ಗಾಯಗೊಂಡ ವ್ಯಕ್ತಿಯನ್ನು ಕೂಡಲೇ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು, ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಪಕ್ಕದ ಇಳಕಲ್ ಪಟ್ಟಣಕ್ಕೆ ಕಳುಹಿಸಿಕೊಟ್ಟಿದ್ದಾರೆ ಎಂದು ಮುಖ್ಯಾಧಿಕಾರಿ ಧರಣೇಂದ್ರಕುಮಾರ ಅವರು ಮಾಹಿತಿ ನೀಡಿದ್ದಾರೆ.