ಶರಣು ಲಿಂಗನಬಂಡಿ
ಕೃಷಿಪ್ರಿಯ ನ್ಯೂಸ್ |
ಸಂಡೂರು: ಸಂವಿಧಾನ ನೀಡಿರುವ ಮತದಾನ ಅತ್ಯಂತ ಪವಿತ್ರವಾದದ್ದು, ಅದನ್ನು ಪ್ರತಿಯೊಬ್ಬರು ಚಲಾಯಿಸಿ ಪ್ರಜಾಪ್ರಭುತ್ವದ ಬುನಾದಿ ಗಟ್ಟಿಗೊಳಿಸಿ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಷಡಕ್ಷರಯ್ಯ ಎಚ್. ಹೇಳಿದರು.
ನಗರದ ಬಸ್ ನಿಲ್ದಾಣದ ಆವರಣದಲ್ಲಿ ಸೋಮವಾರ ಲೋಕಸಭಾ ಚುನಾವಣೆ ಅಂಗವಾಗಿ ನಡೆಯುತ್ತಿರುವ ನಮ್ಮ ನಡೆ ಮತಗಟ್ಟೆ ಕಡೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೇ 7 ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಆಶೆ ಆಮೀಷಗಳಿಗೆ ಬಲಿಯಾಗದೆ ನಮಗೆ ದೊರಕಿರುವ ಅಮೂಲ್ಯವಾದ ಮತದಾನದ ಹಕ್ಕನ್ನು ಪ್ರಜಾತಂತ್ರ ಕಾಪಾಡುವ ಉತ್ತಮ ವ್ಯಕ್ತಿಗೆ ಉತ್ತಮ ಭವಿಷ್ಯಕ್ಕಾಗಿ ಮತದಾನ ಮಾಡಬೇಕು ಎಂದು ಅರ್ಹ ಮತದಾರರಿಗೆ ಕರೆ ನೀಡಿದರು.
ಬಳಿಕ ಇಒ ಅವರಿಂದ ನಂದಿಹಳ್ಳಿ ಸ್ನಾತಕೋತ್ತರ ವಾಣಿಜ್ಯ ಅದ್ಯಾಯನ ವಿಭಾಗದ ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಬಸ್ ನಿಲ್ದಾಣದಿಂದ ಆರಂಭಗೊಂಡ ಮತದಾನ ಜಾಗೃತಿ ಜಾಥಾ ಜೆಸ್ಕಾಂ ಕಚೇರಿ, ವಾಲ್ಮೀಕಿ ಭವನ, ತಾಲೂಕು ಪಂಚಾಯತ್, ತಹಸಿಲ್ದಾರ್ ಕಛೇರಿ ವರೆಗೆ ನಡೆಯಿತು. ಸ್ನಾತಕೋತ್ತರ ಕೇಂದ್ರ ವಾಣಿಜ್ಯ ಅದ್ಯಾಯನ ವಿಭಾಗದ ವಿದ್ಯಾರ್ಥಿಗಳು ಹಾಗೂ ತಾಲೂಕು ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು, ನೌಕರ ಸಿಬ್ಬಂದಿ ಪಾಲ್ಗೊಂಡು ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸಿದರು.
ನಂತರ ಹಲವು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಭಾರತ ಸಂವಿಧಾನದ ಮತದಾನ ವ್ಯವಸ್ಥೆ ಹಾಗೂ ಪ್ರಯೋಜನ ಕುರಿತು ಮಾತನಾಡಿದರು.
ಈ ವೇಳೆ ವಾಣಿಜ್ಯ ಅದ್ಯಾಯನ ವಿಭಾಗದ ಸಂಯೋಜಕ ಡಾ.ಮುಬಾರಕ್, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ರವಿ ಬಿ. ಹಾಗೂ ಪುರಸಭೆ ಅಧಿಕಾರಿಗಳು ಹಾಗೂ ಚುನಾವಣೆ ಸಿಬ್ಬಂದಿ ವರ್ಗ, ಜನಪ್ರತಿನಿಧಿಗಳು ಹಾಗೂ ಸ್ನಾತಕೋತ್ತರ ಕೇಂದ್ರದ ವಾಣಿಜ್ಯ ಅದ್ಯಾಯನ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.