‘ತಪಸ್’ ಕಾಲೇಜಿಗೆ ಸಾತ್ತ್ವಿಕ ಆಯ್ಕೆ!

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ತಳುವಗೇರಾ ಆದರ್ಶ ವಿದ್ಯಾಲಯ 10ನೇ ತರಗತಿ ವಿದ್ಯಾರ್ಥಿ ಸಾತ್ವಿಕ ಗುಡಿಸಾಗರ, ರಾಷ್ಟ್ರೋತ್ಥಾನ ಪರಿಷತ್ ನಿಂದ ನಡೆಯುತ್ತಿರುವ ‘ತಪಸ್’ ಮತ್ತು ‘ಸಾಧನ’ ಪರಿಕ್ಷೆಯ ನಾಲ್ಕು ಹಂತಗಳಲ್ಲಿ ತೆರ್ಗಡೆಯಾಗಿ ತಪಸ್ ಕಾಲೇಜಿಗೆ ಆಯ್ಕೆಯಾಗಿದ್ದಾನೆ.

IIT, JEE ಯಿಂದ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪ್ರತಿಭಾವಂತ ಪುರುಷ ವಿದ್ಯಾರ್ಥಿಗಳಿಗೆ PUC ಯ ಜೊತೆಗೆ IIT ಮತ್ತು JEE ಪರೀಕ್ಷೆಯ ತಯಾರಿಗೆ ತರಬೇತಿಯನ್ನು ಉಚಿತವಾಗಿ ನಿಡುತ್ತಿದೆ. ರಾಷ್ಟ್ರೋತ್ಥಾನ ಪರಿಷತ್ ನಿಂದ ರಾಜ್ಯದಲ್ಲಿ ನಡೆದ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದ ಒಟ್ಟು 45 ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ತಳುವಗೇರಾ ಆದರ್ಶ ವಿದ್ಯಾಲಯ 10ನೇ ತರಗತಿ ವಿದ್ಯಾರ್ಥಿ ಸಾತ್ವಿಕ ಗುಡಿಸಾಗರ ಕೂಡಾ ಒಬ್ಬನಾಗಿದ್ದು, ‘ತಪಸ್’ ಯೋಜನೆಯ ಸೌಲಭ್ಯ ಉಪಯೋಗ ಪಡೆದು ಇನ್ನೂ ಉತ್ತಮವಾದ ಸಾಧನೆ ಮಾಡಲಿ ಎಂದು ಆದರ್ಶ ವಿದ್ಯಾಲಯ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಮುಖ್ಯೋಪಾಧ್ಯಾಯ ಸಂಗಪ್ಪ ಕಿರಸೂರು ಸೇರಿ ಸರ್ವ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.