ಕುಷ್ಟಗಿ ಸರ್ಕಾರಿ ಪದವಿ ಕಾಲೇಜು: 2024-25ನೇ ಸಾಲಿನ ಸ್ನಾತಕ ಪದವಿ ಪ್ರವೇಶಾತಿ ಪ್ರಾರಂಭ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕುಷ್ಟಗಿ : ನ್ಯಾಕ್’ನಿಂದ ‘ಬಿ’ ಗ್ರೇಡ್ ಮಾನ್ಯತೆ ಪಡೆದಿರುವ ಕೊಪ್ಪಳ ವಿಶ್ವವಿದ್ಯಾಲಯದ ಸಂಲಗ್ನತೆ ಒಳಪಟ್ಟ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಸ್ನಾತಕ ಪದವಿ ಪ್ರವೇಶಾತಿ ಪ್ರಾರಂಭವಾಗಿದೆ.

  • ಬಿಎ – ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಐಚ್ಛಿಕ ಕನ್ನಡ, ಐಚ್ಛಿಕ ಇಂಗ್ಲಿಷ್, ಪತ್ರಿಕೋದ್ಯಮ.
  • ಬಿ.ಎಸ್ಸಿ – ಭೌತಶಾಸ್ತ್ರ, ಗಣಿತಶಾಸ್ತ್ರ, ರಸಾಯನಶಾಸ್ತ್ರ.
  • ಬಿ.ಕಾಂ – ಬಿ.ಕಾಂ (ಜನರಲ್)

ಪ್ರವೇಶಾತಿಗೆ ಬೇಕಾಗುವ ದಾಖಲೆಗಳು : ಪಿಯುಸಿ ಮೂಲ ವರ್ಗಾವಣೆ ಪತ್ರ, ಅಂಪಟ್ಟಿ ಮತ್ತು 3 ಝರಾಕ್ಸ್ ಪ್ರತಿಗಳು, ಎಸ್ಸೆಸ್ಸೆಲ್ಸಿ ಅಂಕಪಟ್ಟಿ (3 ಝರಾಕ್ಸ್ ಪ್ರತಿಗಳು), ವಿದ್ಯಾರ್ಥಿ ಮತ್ತು ತಂದೆ-ತಾಯಿಗಳ ಆಧಾರ ಕಾರ್ಡ್ (3 ಝರಾಕ್ಸ್ ಪ್ರತಿಗಳು), 3 ಪಾಸ್ಪೋರ್ಟ್ ಸೈಜ್ ಫೋಟೋ, ಬ್ಯಾಂಕ್ ಪಾಸ್ ಬೂಕ್ (1 ಝರಾಕ್ಸ್ ಪ್ರತಿ), ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರ (3 ಝರಾಕ್ಸ್ ಪ್ರತಿಗಳು), ವಿಕಲಚೇತನ ಪ್ರಮಾಣ ಪತ್ರ (3 ಝರಾಕ್ಸ್ ಪ್ರತಿಗಳು), ಎಸ್.ಎಸ್.ಪಿ. ಐಡಿ ನಂಬರ್, ಸರ್ಕಾರ ನಿಗದಿಪಡಿಸಿದ ಪ್ರವೇಶಾತಿ ಶುಲ್ಕ ಪಾವತಿಸಬೇಕು.

ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸುಸಜ್ಜಿತವಾದ ಕಾಲೇಜು ಕಟ್ಟಡ, ನುರಿತ ಪ್ರಾಧ್ಯಾಪಕರಿಂದ ಭೋಧನೆ, ಡಿಜಿಟಲ್ ಗ್ರಂಥಾಲಯ ಮತ್ತು ವಾಚನಾಲಯ, ಕ್ರೀಡೆ, ಎನ್.ಎಸ್.ಎಸ್. ಸೈಟ್ ಮತ್ತು ಗೈಡ್ಸ್, ರೆಡ್ ರಿಬ್ಬನ್ ಕ್ಲಬ್, ರೆಡ್ ಕ್ರಾಸ್, ಸಾಂಸ್ಕೃತಿಕ ಘಟಕಗಳು., ಐ.ಸಿ.ಟಿ. ಸ್ಮಾರ್ಟ್ ಕ್ಲಾಸ್‌ಗಳು ಮತ್ತು ಉಚಿತ ವೈ-ಫೈ ಸೌಲಭ್ಯಗಳು., ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಗತಿಗಳು, ವಿವಿಧ ವಿದ್ಯಾರ್ಥಿವೇತನ ಸೌಲಭ್ಯ. ಸುಸಜ್ಜಿತ ಕಂಪ್ಯೂಟರ್ ಲ್ಯಾಟ್, ಉದ್ಯೋಗ ಭರವಸಾ ಕೋಶ/ವೃತ್ತಿ ಮಾರ್ಗದರ್ಶನ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ., ಸಿ.ಸಿ.ಟಿ.ವಿ ಅಳವಡಿಕೆ ಮತ್ತು ಕ್ಯಾಂಟೀನ್ ಸೌಲಭ್ಯ, ವಿದ್ಯಾರ್ಥಿನಿಯರಿಗೆ ಬೋಧನಾ ಶುಲ್ಕ ವಿನಾಯಿತಿ/ಮರುಪಾವತಿ ಈ ಎಲ್ಲಾ ವಿಶೇಷ ಸೌಲಭ್ಯಗಳನ್ನು ಕಾಲೇಜು ಒಳಗೊಂಡಿದೆ.

ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳು ಕಾಲೇಜು ಕಚೇರಿ

  • (9449143595,
  • 9731572748,
  • 9481574647,
  • 9740344899,
  • 9448775409,
  • 8197444941,
  • 9449438631)

ಈ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಬೇಕು ಎಂದು ಪ್ರಾಂಶುಪಾಲ ಡಾ.ಎಸ್.ವಿ. ಡಾಣಿ ಅವರು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.