ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಪ್ರಸಕ್ತ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯ ಕುಷ್ಟಗಿ ತಾಲೂಕಿನ ಮೂವರು ವಿದ್ಯಾರ್ಥಿಗಳು 625ಕ್ಕೆ 611( ಶೇ.97.76) ಅಂಕ ಪಡೆದು ಗಮನಸೆಳೆದಿದ್ದಾರೆ.
ಈ ಬಾರಿ ತಾಲೂಕಿನಲ್ಲಿ ಒಟ್ಟಾರೆ ಶೇ. 57.47ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷದ ಫಲಿತಾಂಶ(ಶೇ.90.14) ಹೋಲಿಕೆ ಮಾಡಿದರೆ, ಈ ಬಾರಿ ಶೇ. 35 ರಷ್ಟು ಫಲಿತಾಂಶ ಕುಸಿತ ಕಂಡಿದೆ. ಸರ್ಕಾರಿ, ಅನುದಾನಿತ, ಅನುದಾನ ರಹಿತ, ವಸತಿಯುತ, ಇತರೆ ಶಾಲೆ ಸೇರಿ ಒಟ್ಟು 64 ಶಾಲೆಗಳಿಂದ ಪರೀಕ್ಷೆಗೆ ಹಾಜರಾದ ಒಟ್ಟು 4658 ಪೈಕಿ 2677 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ 3 ಶಾಲೆಗಳು 100ರಷ್ಟು ಫಲಿತಾಂಶ ಕಂಡರೆ, ಶೇ.90ರಷ್ಟು 05 ಶಾಲೆಗಳು, ಶೇ.80ರಷ್ಟು 03, ಶೇ.70ರಷ್ಟು 06, ಶೇ.60ರಷ್ಟು 10, ಶೇ.50ರಷ್ಟು 15, ಶೇ.40ರಷ್ಟು 12, ಶೇ.30ರಷ್ಟು 05, ಶೇ.20 ರಷ್ಟು 03, ಶೇ.10 ರಷ್ಟು 02 ಶಾಲೆಗಳು ಫಲಿತಾಂಶ ಹೊಂದಿವೆ.
ಹೆಚ್ಚು ಅಂಕ ಪಡೆದವರು:
ತಳುವಗೇರಾ ಆದರ್ಶ ಶಾಲೆಯ ವಿದ್ಯಾರ್ಥಿನಿ ದಿವ್ಯಾ ನಾಯಕ ಗರಿಷ್ಠ 625ಕ್ಕೆ 611 ಅಂಕ ಪಡೆದು ಶೇ. 97.76 ಸಾಧನೆ
ತಳುವಗೇರಾ ಆದರ್ಶ ಶಾಲೆಯ ವಿದ್ಯಾರ್ಥಿನಿ ಸುಷ್ಮಿತಾ ವಾಲೀಕಾರ ಗರಿಷ್ಠ 625ಕ್ಕೆ 611 ಅಂಕ ಪಡೆದು ಶೇ. 97.76 ಸಾಧನೆ
ಮೆಣೆದಾಳ ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ವಿಕ್ರಮ ರಾಠೋಡ 625ಕ್ಕೆ 611 ಅಂಕ ಪಡೆದು ಶೇ. 97.76 ಸಾಧನೆ
ತಳುವಗೇರಾ ಆದರ್ಶ ಶಾಲೆಯ ವಿದ್ಯಾರ್ಥಿನಿ ಅಪೇಕ್ಷಾ ಅಂಗಡಿ ಶೇ. 97.44.
ಮೆಣೇಧಾಳ ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಶಶಿಧರ ಎನ್. ಶೇ.97.28.
ಹನುಮಸಾಗರ ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿ ಪ್ರಶಾಂತ ರೆಡ್ಡಿ ಶೇ. 97.28.
ತಳುವಗೇರಾ ಆದರ್ಶ ಶಾಲೆಯ ವಿದ್ಯಾರ್ಥಿ ಸಾತ್ವಿಕ್ ಗುಡಿಸಾಗರ ಶೇ. 96.96.
ಕಾಟಾಪೂರ ಮುರಾರ್ಜಿ ವಸತಿ ಶಾಲೆ ವಿದ್ಯಾರ್ಥಿ ಸಾಗರ ಗಾಳಿ ಶೇ. 96.08.
ಕಾಟಾಪೂರ ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಐಶ್ವರ್ಯ ಮಠದ ಶೇ.96.08.
ತಳುವಗೇರಾ ಆದರ್ಶ ಶಾಲೆಯ ವಿದ್ಯಾರ್ಥಿನಿ ವೈಷ್ಣವಿ ದೇಸಾಯಿ ಶೇ.96.64.
ಕಾಟಾಪೂರ ಮುರಾರ್ಜಿ ವಸತಿ ಶಾಲೆ ವಿದ್ಯಾರ್ಥಿ ಅರ್ಜುನ್ ಗೋತಗಿ ಶೇ. 96.32 ರಷ್ಟು ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಗಮನಾರ್ಹ ಸಾಧನೆ ಮಾಡಿದಿರುವ ಹಾಗೂ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Superb coverage sir