ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ: 2023-24ನೇ ಸಾಲಿನ ತಾಲೂಕನ್ನು ತೀವ್ರ ಬರ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿದ ಹಿನ್ನೆಲೆ ಇತ್ತೀಚೆಗೆ ರೈತರ ಬ್ಯಾಂಕ್ ಖಾತೆಗಳಿಗೆ ಬರ ಪರಿಹಾರ ಜಮೆ ಮಾಡಿದೆ. ಆದರೆ, ಪರಿಹಾರ ಜಮೆಯಾಗದಿದ್ದಲ್ಲಿ ರೈತರು, ನ್ಯೂನತೆಗಳನ್ನು ಸರಿಪಡಿಸಿಕೊಂಡು ಪರಿಹಾರ ಪಡೆದುಕೊಳ್ಳಲು ಹೋಬಳಿವಾರು ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಈ ಕುರಿತು ಬುಧವಾರ ತಹಸೀಲ್ದಾರ್ ರವಿ ಎಸ್. ಅಂಗಡಿ ಅವರು ಪ್ರಕಟಣೆ ಹೊರಡಿಸಿದ್ದು, ಕುಷ್ಟಗಿ ತಹಸೀಲ್ದಾರ್ ಕಾರ್ಯಾಲಯ (ದೂರವಾಣಿ ಸಂಖ್ಯೆ : 08536 267031) ಅಥವಾ ರೈತ ಸಂಪರ್ಕ ಕೇಂದ್ರಗಳ ಅಧಿಕಾರಿಗಳನ್ನು ಕಚೇರಿ ವೇಳೆ(ಬೆಳಿಗ್ಗೆ 10.30ರಿಂದ 5.30ರೊಳಗೆ) ಸಂಪರ್ಕಿಸಲು ರೈತ ಬಾಂಧವರಲ್ಲಿ ಮನವಿ ಮಾಡಿದ್ದಾರೆ.
ತೋಟಗಾರಿಕೆ ಇಲಾಖೆ ರೈತ ಸಂಪರ್ಕ ಕೇಂದ್ರಗಳಾದ
- ಹನುಮಸಾಗರ ರೈತ ಸಂಪರ್ಕ ಕೇಂದ್ರ (ಅಧಿಕಾರಿ ಶಿವಪ್ಪ – 9740084555),
- ಕುಷ್ಟಗಿ ರೈತ ಸಂಪರ್ಕ ಕೇಂದ್ರ (ಅಧಿಕಾರಿ ಗುರುನಾಥ – 7899968841),
- ತಾವರಗೇರಾ ರೈತ ಸಂಪರ್ಕ ಕೇಂದ್ರ (ಅಧಿಕಾರಿ ಮೊಹಮ್ಮದ್ – 9060550146),
- ಹನುಮನಾಳ ರೈತ ಸಂಪರ್ಕ ಕೇಂದ್ರ (ಅಧಿಕಾರಿ ಅಜರುದ್ದೀನ್ – 7411794964)
ಹಾಗೂ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳಾದ
- ಕುಷ್ಟಗಿ ರೈತ ಸಂಪರ್ಕ ಕೇಂದ್ರ (ಅಧಿಕಾರಿ ಪ್ರಮೋದ – 8971437367),
- ತಾವರಗೇರಾ ರೈತ ಸಂಪರ್ಕ ಕೇಂದ್ರ (ಅಧಿಕಾರಿ ಆಶಾ – 9740265759),
- ಹನುಮಸಾಗರ ರೈತ ಸಂಪರ್ಕ ಕೇಂದ್ರ (ಅಧಿಕಾರಿ ಪ್ರಕಾಶ ತಾರಿವಾಳ – 8277932147),
- ಹನುಮನಾಳ ರೈತ ಸಂಪರ್ಕ ಕೇಂದ್ರ (ಅಧಿಕಾರಿ ನಾಗನಗೌಡ – 8277932149)
ಈ ಸಹಾಯವಾಣಿ ಕೇಂದ್ರಗಳ ಸಂಖ್ಯೆಗಳಿಗೆ ಸಂಪರ್ಕಿಸಿ ಬರ ಪರಿಹಾರ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಬಹುದು.