ಮುಕಪ್ಪ ಚನ್ನದಾಸರ ಇನ್ನಿಲ್ಲ

ಕೃಷಿಪ್ರಿಯ ನ್ಯೂಸ್ |

ಯಲಬುರ್ಗಾ : ತಾಲೂಕಿನ ತುಮ್ಮರಗುದ್ದಿ ಗ್ರಾಮದ ನಿವಾಸಿ ಚನ್ನದಾಸರ ಸಮುದಾಯದ ಮುಕಪ್ಪ ತಂ. ದುರಗಪ್ಪ ಚನ್ನದಾಸರ (40) ಶುಕ್ರವಾರ ನಿಧಾನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ. ಸ್ವಗ್ರಾಮ ತುಮ್ಮರಗುದ್ದಿಯಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.