ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ವಿನಾಯಕ ದಾಮೋದರ ಸಾವರ್ಕರ್ ವಿರುದ್ಧ ಫೇಸ್ ಬುಕ್ ಸ್ಟೇಟಸಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ವ್ಯಕ್ತಿಯೋರ್ವನ ವಿರುದ್ಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ದೋಟಿಹಾಳ ಗ್ರಾಮದ ವೆಲ್ಡಿಂಗ್ ವರ್ಕರ್ ಹುಸೇನಸಾಬ್ ಲಾಡಸಾಬ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನು ತನ್ನ ಫೇಸ್ ಬುಕ್ ಸ್ಟೇಟಸನಲ್ಲಿ ವೀರಸಾವರರ್ಕರ್ ಒಬ್ಬ ದೇಶದ ಫಸ್ಟ್ ಟೆರರಿಸ್ಟ್ ಎಂದು ಪೋಸ್ಟ್ ಮಾಡಿದ್ದಾನೆ. ಎಡಿಟ್ ಮಾಡಿದ ವೀರಸಾವರ್ಕರ ಫೋಟೋ ಕೆಳಗೆ ರಣ ಹೇಡಿ ಸಾವರ್ಕರ್ ಎಂದು ಬರೆದುಕೊಂಡಿದ್ದಾನೆ. ಈ ಕುರಿತು ಪೊಲೀಸ್ ಇಲಾಖೆ ಗಮನಕ್ಕೆ ಬಂದಿದ್ದು, ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಸ್ವಯಂ ದೂರು ದಾಖಲಿಸಿಕೊಂಡಿರುವ ಕುಷ್ಟಗಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪಿಎಸ್’ಐ ಮುದ್ದುರಂಗಸ್ವಾಮಿ ಅವರು ತಿಳಿಸಿದ್ದಾರೆ.