ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ಕೊಪ್ಪಳ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ ಪ್ರಾಧಿಕಾರಕ್ಕೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಎಸ್.ವಿ.ಡಾಣಿ ಅವರು ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಈ ಕುರಿತು ಕೊಪ್ಪಳ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಕೆ.ವಿ.ಪ್ರಸಾದ ಅವರು ಜೂನ್ 6ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮದಡಿ ಆಯ್ಕೆಗೊಂಡ ಸಂಯೋಜಿತ ಕಾಲೇಜುಗಳ 10 ಜನ ಪ್ರಾಂಶುಪಾಲರುಗಳಲ್ಲಿ ಡಾ.ಎಸ್.ವಿ.ಡಾಣಿ ಅವರು ಒಬ್ಬರು ನಾಮನಿರ್ದೇಶನ ಹೊಂದಿದ್ದಾರೆ. ನಾಮನಿರ್ದೇಶನ ಹೊಂದಿರುವ ಸದಸ್ಯರು ಎರಡು ವರ್ಷದ ಅವಧಿಗೆ ಈ ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಕುಲಸಚಿವರು ಆದೇಶದಲ್ಲಿ ತಿಳಿಸಿದ್ದಾರೆ.