ಹನುಮಸಾಗರ | ಬೈಕ್ ಕಳ್ಳನ ಬಂಧನ, ₹2, 80000 ಬೆಲೆ ಬಾಳುವ 3 ಬೈಕ್’ಗಳು ವಶ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ : ಇತ್ತೀಚೆಗೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಬೈಕ್’ಗಳನ್ನು ಶನಿವಾರ ಬೆಳಿಗ್ಗೆ ಶೋಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತಾಲೂಕಿನ ಹನುಮಸಾಗರ ಬಸ್ ನಿಲ್ದಾಣ ಹಾಗೂ ಜಹಗೀರಗುಡದೂರು ಗ್ರಾಮಗಳಲ್ಲಿ ನಿಲ್ಲಿಸಲಾಗಿದ್ದ
ಬೈಕ್’ಗಳು ಕಳ್ಳತನವಾದ ಕುರಿತು ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಕಳ್ಳರ ಪತ್ತೆಗೆ ಜಿಲ್ಲಾ ವರಿಷ್ಠಾಧಿಕಾರಿ ಯಶೋಧಾ ವಂಟಿಗೋಡಿ, ಗಂಗಾವತಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್, ಕುಷ್ಟಗಿ ಸಿಪಿಐ ಯಶವಂತ ಬಿಸನಳ್ಳಿ ಅವರ ಮಾರ್ಗದರ್ಶನ ಮೇರೆಗೆ ಪಿಎಸೈ ವಿರುಪಾಕ್ಷಪ್ಪ, ಕ್ರೈಂ ಪಿಎಸ್’ಐ ಶ್ರೀಶೈಲರಾವ್ ಕುಲಕರ್ಣಿ, ಸಿಬ್ಬಂದಿ ವಸಂತ, ಸಂಗಮೇಶ ರಾಜೂರು, ಕರಿಸಿದ್ದಪ್ಪ ಜೋಗಿನ್, ಮಲ್ಲಪ್ಪ ರಾಜೂರು, ಮಂಜುನಾಥ, ಸಿದ್ದರಾಮಪ್ಪ, ಶರಣಪ್ಪ ಹಾಗೂ ಪ್ರಶಾಂತ ಅವರ ನೇತೃತ್ವದಲ್ಲಿ ರಚನೆಯಾದ ತಂಡ ಶೋಧ ಕಾರ್ಯ ಕೈಗೊಂಡಿತ್ತು. ಇಂದು ಬೆಳಗ್ಗೆ ಹನುಮಸಾಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯವೇಳೆ ಪೊಲೀಸರು ವೆಂಕಟಾಪೂರ ಗ್ರಾಮದ ಆಕಾಶ ಎಂಬ ಟ್ರ್ಯಾಕ್ಟರ್ ಚಾಲಕನನ್ನು ಹಿಡಿದು ವಿಚಾರಣೆಗೆ ಒಳಪಡಿಸಿದ್ದಾರೆ. ನಕಲಿ ಚಾವಿ ಬಳಸಿ ಬೈಕ್’ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡಲು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿರುವ ಕುರಿತು ತಿಳಿದ ಪೊಲೀಸರು, ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿತರಿಂದ

₹35,000 ಬೆಲೆ ಬಾಳುವ KA 37 EF 4707 ಸಂಖ್ಯೆಯ ಹಿರೋ ಸ್ಪ್ಲೆಂಡರ್ ಪ್ಲಸ್, ₹2 ಲಕ್ಷ ಬೆಲೆ ಬಾಳುವ KA 02 KQ 4132 ಸಂಖ್ಯೆಯ ರಾಯಲ್ ಎನ್’ಫಿಲ್ಡ್ ಮತ್ತು ₹45,000 ಬೆಲೆ ಬಾಳುವ KA 29 W 4757 ಸಂಖ್ಯೆಯ ಹೀರೋ ಗ್ಲಾಮರ್ ಸೇರಿ ಒಟ್ಟು ₹2, 80000 ಬೆಲೆ ಬಾಳುವ ಬೈಕ್’ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶೋಧ ಕಾರ್ಯದಲ್ಲಿ ತೊಡಗಿದ್ದ ತಂಡಕ್ಕೆ ಮೇಲಧಿಕಾರಿಗಳು ಶ್ಲಾಘಿಸಿದ್ದಾರೆ.