ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ಲೋಕಸಭಾ ಚುನಾವಣೆ ಕರ್ತವ್ಯ ಮೇರೆಗೆ ವರ್ಗಾವಣೆಯಾಗಿದ್ದ ಇಲ್ಲಿನ ಕುಷ್ಟಗಿ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ ಅವರು ಚುನಾವಣಾ ಕರ್ತವ್ಯ ಮುಗಿಸಿದ ಬಳಿಕ ತಮ್ಮ ಮೂಲ ಕರ್ತವ್ಯ ಸ್ಥಳಕ್ಕೆ ಮರಳಿ ಗುರುವಾರ ಅಧಿಕಾರ ಸ್ವೀಕರಿಸಿದರು.
ಕೊಪ್ಪಳ ಲೋಕಸಭಾ ಚುನಾವಣೆ ಅಂಗವಾಗಿ ತಾಲೂಕಿಗೆ ಆಗಮಿಸಿದ್ದ ರಾಯಚೂರು ಜಿಲ್ಲೆಯ ಸಿರವಾರ ತಹಸೀಲ್ದಾರ್ ರವಿ ಎಸ್.ಅಂಗಡಿ ಅವರು ಇಂದು ಮದ್ಯಾಹ್ನ ಶೃತಿ ಮಳ್ಳಪ್ಪಗೌಡರ ಅವರನ್ನು ಸ್ವಾಗತಿಸಿ ಅಧಿಕಾರ ಹಸ್ತಾಂತರಿಸಿದರು. ತಹಶೀಲ್ದಾರ್ ರವಿ ಎಸ್ ಅಂಗಡಿ ಅವರು ಪುನಃ ತಮ್ಮ ಮೂಲ ಕರ್ತವ್ಯ ಸ್ಥಳ ಸಿರವಾರ ತಾಲೂಕಿಗೆ ತೆರಳುವ ಹಿನ್ನಲೆ ಕಾರ್ಯಾಲಯದಲ್ಲಿ ತಹಸೀಲ್ದಾರ್ ರವಿ ಎಸ್. ಅಂಗಡಿ ಮತ್ತು ಅವರ ಕುಟುಂಬವನ್ನು ಶೃತಿ ಮಳ್ಳಪ್ಪಗೌಡರ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ವರ್ಗ ಸನ್ಮಾನಿಸಿ ಬೀಳ್ಕೊಟ್ಟರು. ಈ ವೇಳೆ ಶಿರಸ್ಥೆದಾರ ಸತೀಶ ಗಂಡಿಗಾರಿ, ಗ್ರೇಡ್-2 ತಹಸೀಲ್ದಾರ್ ಮುರಳೀಧರ ಮುಕ್ತೆದಾರ, ಬಿ.ಜಯಾ, ಕಂದಾಯ ನಿರೀಕ್ಷಕರು ಸೇರಿದಂತೆ ಸಿಬ್ಬಂದಿ ವರ್ಗ ಹಾಜರಿದ್ದರು.