ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ತಾಲೂಕಿನ ತಳುವಗೇರಾ ಗ್ರಾಮದ ಆದರ್ಶ ವಿದ್ಯಾಲಯ ಆರ್.ಎಮ್.ಎಸ್.ಎ ಶಾಲೆಯ 7,8 ಹಾಗೂ 9ನೇ ತರಗತಿಯಲ್ಲಿ ಪ್ರಸಕ್ತ ಸಾಲಿನ ಮೀಸಲಾತಿವಾರು ಖಾಲಿ ಇರುವ ಸ್ಥಾನಗಳಿಗೆ ಭರ್ತಿ ಮಾಡಲು ಪ್ರವೇಶ ಪರೀಕ್ಷೆಗಾಗಿ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಕುರಿತು ಮುಖ್ಯಶಿಕ್ಷಕ ಸಂಗಪ್ಪ ಕಿರಸೂರು ಅವರು ಗುರುವಾರ ಮಾಧ್ಯಮ ಮುಖಾಂತರ ಪ್ರಕಟಣೆ ಹೊರಡಿಸಿದ್ದು, ಜೂನ್ 13 ರಿಂದ 20ರ ಒಳಗಾಗಿ ಶಾಲೆಯಲ್ಲಿ ಅರ್ಜಿಗಳನ್ನು ಪಡೆದು ಭರ್ತಿಮಾಡಿ ಸೂಕ್ತ ದಾಖಲೆಗಳೊಂದಿಗೆ ಜೂನ್ 20 ಸಂಜೆ 05.30ರ ಒಳಗೆ ಸಲ್ಲಿಸಬೇಕು. ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಪ್ರವೇಶ ಪರೀಕ್ಷೆಯನ್ನು ಕುಷ್ಟಗಿ ಪಟ್ಟಣದ ಕೊಪ್ಪಳ ರಸ್ತೆಯ ಶ್ರೀ ರೇಣುಕಾಚಾರ್ಯ ಕಲ್ಯಾಣ ಮಂಟಪದ ಹತ್ತಿರ ಸರಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಜೂನ್ 23 ರಂದು ಭಾನುವಾರ ಬೆಳಿಗ್ಗೆ 11.00 ಗಂಟೆಯಿಂದ 01.30 ರ ವರೆಗೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
- ಹೆಚ್ಚಿನ ಮಾಹಿತಿಗಾಗಿ ತಳುವಗೇರಾ ಆದರ್ಶ ವಿದ್ಯಾಲಯ ಆರ್.ಎಮ್.ಎಸ್.ಎ ಶಾಲೆಯ ಮುಖ್ಯಶಿಕ್ಷಕ ಸಂಗಪ್ಪ ಕಿರಸೂರು ತಮ್ಮ ಮೊಬೈಲ್ ಸಂ. 9008976878 ಗೆ ಕರೆ ಮಾಡಲು ಕೋರಿದ್ದಾರೆ.