ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಅನ್ನದಾತ (ರೈತ)ನೇ ಬೆನ್ನೆಲುಬು. ಈ ಅನ್ನದಾತನ ಹೆಸರಲ್ಲಿ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಂದಕೂರಿನಲ್ಲಿ ಗ್ರಾಮಸ್ಥರು ನಾಮಫಲಕ ಅಳವಡಿಸಿ ವೃತ್ತ ನಿರ್ಮಿಸಿರುವುದು ವಿಶೇಷ.
ಹೌದು, ನಮ್ಮ ರಾಜ್ಯದ ಉದ್ದಗಲಕ್ಕೂ ಅನೇಕ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾನ್ಯವಾಗಿ ದೇವರು, ಶರಣರು, ಸಂತರು, ದಾಸರು, ದಾರ್ಶನಿಕರು ಮತ್ತು ದೇಶಕ್ಕಾಗಿ ಹೋರಾಡಿ ಪ್ರಾಣ ಬಲಿದಾನ ಮಾಡಿದ ಯೋಧರ ಹೆಸರಲ್ಲಿ, ಜನಪ್ರತಿನಿಧಿಗಳ ಹೆಸರಲ್ಲಿ ಹಾಗೂ ಖ್ಯಾತ ಸಿನಿಮಾ ನಟರ ಹೆಸರುಗಳಲ್ಲಿ ವೃತ್ತಗಳು ಕಾಣಸಿಗುತ್ತವೆ.
ಯಾವುದೇ ಜಾತಿ, ಪಂಥ, ಧರ್ಮಕ್ಕೆ ಸೀಮಿತವಾಗದೆ ಲೋಕಕ್ಕೆ ಅನ್ನ ನೀಡುವ ರೈತ ಕೇವಲ ಹೆಸರಿಗೆ ಮಾತ್ರ ಅನ್ನದಾತ ಎಂದು ಕರೆಯಲಾಗುತಿತ್ತು. ಆತನ ಹೆಸರಲ್ಲಿ ಎಲ್ಲೂ ವೃತ್ತಗಳಿರುವುದು ಕೇಳಿದ್ದಿಲ್ಲ. ಇಂದು ಶುಕ್ರವಾರ ಕಂದಕೂರು ಗ್ರಾಮದ ಸಾರಿಗೆ ಬಸ್ ತಂಗುದಾಣ ಬಳಿ ಸಾರ್ವಜನಿಕ ಸ್ಥಳದಲ್ಲಿ ಕಂದಕೂರು ಗ್ರಾಮದ ಅನ್ನದಾತರ ವೃತ್ತ ಎಂದು ನಾಮಫಲಕ ಅಳವಡಿಸಿ ಉದ್ಘಾಟಿಸಿರುವುದು ಗಮನ ಸೆಳೆದಿದೆ.
ಗ್ರಾಮದ ಹಿರಿಯರಾದ ರುದ್ರಗೌಡ ಮಾಲಿಪಾಟೀಲ್ ವೃತ್ತವನ್ನು ಉದ್ಘಾಸಿದ್ದಾರೆ. ಈ ವೇಳೆ ಶರಣಯ್ಯ ಅಬ್ಬಿಗೇರಿ, ಶರಣಪ್ಪ ಗೋಪಾಲ್, ಬಸವರಾಜ ಕೋಣಿ, ಜಗದೀಶ್ ಗುರಿಕಾರ, ಆಂಜನೇಯ ಆದಿಮನಿ, ಭೀಮಣ್ಣ ಬಾವಿಕಟ್ಟಿ, ಮಾರುತಿ ಬೆನಿಗಿಡ, ರಮೇಶ ಕುಂಬಾರ, ನಾಗಪ್ಪ ಮಡಿವಾಳ, ಶರಣಪ್ಪ ಅರೆರ, ಶರಣಪ್ಪ ಕಡಿವಾಳ, ಬಸವರಾಜ ಕುಂಬಾರ, ಶರಣಪ್ಪ ನೀರುಲೂಟಿ, ಸಂಗಮೇಶ ಕುಂಬಾರ, ಹನುಮಂತ ಗದ್ದಿ, ಬಸವರಾಜ ವಾಲ್ಮೀಕಿ, ಶರಣಪ್ಪ ಉಪ್ಪಾರ, ಮಾರುತಿ ಹೂಗಾರ, ಮಾರುತಿ ಹಲಗಿ, ಮತ್ತುರಾಜ, ಶರಣಪ್ಪ ಉಪ್ಪಾರ, ಭೀಮಣ್ಣ ಬಿಜಿಕಲ್, ಹನುಮಂತ ರಾಟಿ, ಹನುಮಂತ ಕುಂಬಾರ, ರಾಮು, ದೀಪು, ಸಂಗಮೇಶ ಕುಂಬಾರ ಸೇರಿದಂತೆ ಗ್ರಾಮದ ಅನೇಕ ರೈತಾಪಿ ವರ್ಗ ಪಾಲ್ಗೊಂಡಿದ್ದರು.