ಶರಣು ಲಿಂಗನಬಂಡಿ
ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ತಾಲೂಕಿನ ನಿಡಶೇಸಿ ಗ್ರಾಮದಲ್ಲಿ ಶುಕ್ರವಾರ ವೀರ ಶಿರೋಮಣಿ ರಾಷ್ಟ್ರಪುರುಷ ಮಹಾರಾಣಾ ಪ್ರತಾಪ್ ಸಿಂಹರವರ 484ನೇ ಜಯಂತೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಇಂದು ಬೆಳಿಗ್ಗೆ ಗ್ರಾಮದ ಶ್ರೀಮಠದ ಅಭಿನವ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಮತ್ತು ಹುಲಿಗಮ್ಮ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ಪರಶುರಾಮ ಸಿಂಗ್ ಪೂಜಾರ ಅವರು ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು.
ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮಹಾರಾಣಾ ಪ್ರತಾಪ್ ಸಿಂಹರವರ ಭಾವಚಿತ್ರ ಮೆರವಣಿಗೆಯಲ್ಲಿ ಸಾಂಪ್ರದಾಯಿಕ ಕೇಸರಿ ರುಮಾಲು ಧರಿಸಿ ಪಾಲ್ಗೊಂಡಿದ್ದ ಕಳಸ ಕನ್ನಡಿ ಹಿಡಿದ ನೂರಾರು ಮಹಿಳೆಯರು ಮೆರಗು ತಂದರು. ಮೆರವಣಿಗೆಯುದ್ದಕ್ಕೂ ಮೊಘಲ ಸಾಮ್ರಾಜ್ಯದ ವಿರುದ್ಧ ದೃಢವಾಗಿ ನಿಂತು ಹೋರಾಡಿದ ಮಹಾರಾಣಾ ಪ್ರತಾಪ್ ಸಿಂಹರ ಧೀರತೆಯ ಕುರಿತು ಘೋಷಣೆಗಳು ಮೊಳಗಿದವು. ಮೆರವಣಿಗೆಯಲ್ಲಿ ಗ್ರಾಮದ ಪ್ರಮುಖರಾದ ಭರ್ಜರಿ ಸಿಂಗ್ ಪೂಜಾರಿ, ವೆಂಕೋಬ ಸಿಂಗ್ ಎಲಿಗಾರ, ಬಸವರಾಜ ಗಾಧಾರಿ, ಧೀರೇಂದ್ರ ರಾವ್ ಮುಜುಮ್ದಾರ, ಕನಕಪ್ಪ ಅಗಸಿ ಮುಂದಿನ, ಮಂಜುನಾಥ ಗುಳಗುಳಿ, ಮಂಜುನಾಥ ಕೆ.ಬಿ., ಶರಣಪ್ಪ ಬಾವಿಕಟ್ಟಿ, ಸಂಗಪ್ಪ ಹುಣಸಿಹಾಳ, ಹನುಮಪ್ಪ ಬಂಡಿಹಾಳ, ದುರ್ಗಪ್ಪ ಭಜಂತ್ರಿ, ಶರಣಪ್ಪ ಆದಿಮನಿ, ಗೇಸುದರಾಜ ಮುದ್ಗಲ್, ವಿಠಲಸಿಂಗ್ ಎಲಿಗಾರ, ಅರ್ಜುನ ಸಿಂಗ್, ವಿಠ್ಠಲ ಚಳಗೇರಿ ಸೇರಿದಂತೆ ರಜಪೂತ ಸಮಾಜದ ಮತ್ತು ಗ್ರಾಮದ ಅನೇಕರು ಭಾಗವಹಿಸಿದ್ದರು.