– ಶರಣಪ್ಪ ಕುಂಬಾರ.
ಕೊಪ್ಪಳ : ಕಾರ್ಮಿಕ ಇಲಾಖೆಯಿಂದ ಕಿಟ್ ಗಳನ್ನು ಪಡೆಯಲು ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮಕ್ಕೆ ಆಗಮಿಸಿದ್ದ ಸಾವಿರಾರು ಜನ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಯಾವುದೇ ಕಿಟ್ ಗಳು ಇಲ್ಲದೆ, ಖಾಲಿ ಕೈಯಿಂದ ಮರಳಿದ ಘಟನೆ ಜರುಗಿತು..!
ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಇಲ್ಲಿಯವರೆಗೂ 23236 ಜನ ಕಾರ್ಮಿಕರು ನೊಂದಣೆಯಾಗಿದ್ದಾರೆ. ಆದರೆ, ಸರಕಾರ 5000 ಕಿಟ್ ಗಳನ್ನು ಮಾತ್ರ ನೀಡಿದ್ದು ಗೊಂದಲಕ್ಕೆ ಕಾರಣವಾಗಿತು. ಇಲಾಖೆ ತಂದಿಂದ ಕಿಟ್ ಗಳಿಗೂ ಇಂದು ಕಿಟ್ ಗಳನ್ನು ಪಡೆಯಲು ಹಾಜರಾಗಿದ್ದ ಸಂಖ್ಯೆಗೂ ದುಪ್ಪಟ್ಟು ಹೆಚ್ಷಾಗಿರುವ ಹಿನ್ನಲೆಯಲ್ಲಿ ಕಿಟ್ ವಿತರಣೆಯನ್ನು ಮುಂದೂಡಲಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ವೀನಾ ಮಾರುತಿ ಪತ್ರಿಕೆಗೆ ಸ್ಪಷ್ಟಪಡಿಸಿದರು.
ವಿತರಣಾ ಕಾರ್ಯಕ್ರಮ ರದ್ದು : ಕಾರ್ಮಿಕರಿಗೆ ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಸರಕಾರ ಜಾರಿಗೆ ತಂದಿಂದ ಕಿಟ್ ವಿತರಣಾ ಕಾರ್ಯಕ್ರಮ ಮುಂದೂಡಲಾಗಿತು. ವಿತರಣೆಗೆ ಆಗಮಿಸಿದ ಶಾಸಕ ಅಮರೇಗೌಡ ಪಾಟೀಲ ಕೆಲ ಗಂಟೆಗಳ ಖಾಲಿ ಕುಳಿತು ಮರಳಿದ ಪ್ರಸಂಗ ಕೂಡಾ ಜರುಗಿತು. ಕಿಟ್ ಗಳಲ್ಲಿನ ಅಕ್ಕಿ, ಬೆಲ್ಲ, ಎಣ್ಣಿ ಸೇರಿದಂತೆ ಇನ್ನಿತರ ದಿನಸಿಗಳನ್ನು ಪಡೆದುಕೊಂಡು ಜೀವನ ಸಾಗಿಸಬೇಕು ಎಂದು ಕನಸು ಕಂಡು ಸಾವಿರಾರು ಸಂಖ್ಯೆಯಲ್ಲಿ ಸೇರಿದ ಕಾರ್ಮಿಕರು ಮಾತ್ರ ಸರಕಾರದ ವಿರುದ್ಧ ಹಿಡಿಶಾಪ ಹಾಕಿ, ಮನನೊಂದು ಮನೆಗೆ ತೆರಳಿದ ಪ್ರಸಂಗ ಮಾತ್ರ ಮನಕಲಕುವಂತಾಗಿತು..!!