ಕೃಷಿಪ್ರಿಯ ನ್ಯೂಸ್ |
ಕುಷ್ಟಗಿ : ಹೊಸ ಫೀಡರ್ ಚಾಲನಾ ಕಾಮಗಾರಿ ನಿಮಿತ್ತ ಪಟ್ಟಣದ ಮಾರುತಿ ನಗರ ಸೇರಿದಂತೆ ತಾಲೂಕಿನ ಕಂದಕೂರು ರೂರಲ್ ಫೀಡರ್ ವ್ಯಾಪ್ತಿಯ ಪ್ರದೇಶಗಳಲ್ಲಿ ಜೂನ್ 20 ರಂದು ಗುರುವಾರ ಬೆಳಿಗ್ಗೆ 11 ಗಂಟೆಯಿಂದ ಸಂಜೆ 06ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಈ ಕುರಿತು ಇಲ್ಲಿಯ ಜೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪಟ್ಟಣದ ಮಾರುತಿ ನಗರ ಸೇರಿದಂತೆ ಕಂದಕೂರು ಫೀಡರ್ ವ್ಯಾಪ್ತಿಯ ಪ್ರದೇಶಗಳಾದ ಕಂದಕೂರು, ನಾಗರಾಳ ಸೇರಿ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಕೃಷಿ ಪಂಪ್ಸೆಟ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದ್ದಾರೆ.
ಸೂಚನೆ : ಹೊಸ ಫೀಡರ್ ಚಾಲನಾ ಕಾಮಗಾರಿ ನಿಮಿತ್ತ ಕೈಗೊಂಡಿರುವ ಕಾರ್ಯ ಬೇಗನೆ ಮುಕ್ತಾಯಗೊಂಡರೆ ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಹಾಗಾಗಿ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ತಿ ಕಾರ್ಯ ಮಾಡಬಾರದು ಎಂದು ಕೋರಿರುವ ಜೆಸ್ಕಾಂ ಅಧಿಕಾರಿಗಳು, ಒಂದುವೇಳೆ ವಿದ್ಯುತ್ ಅಪಘಾತ ಸಂಭವಿಸಿದ್ದಲ್ಲಿ ಕಂಪನಿ ಜವಾಬ್ದಾರಿ ಆಗಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.