ಕುಷ್ಟಗಿ | ತಾಲೂಕಿನ ಎಲ್ಲೆಡೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಂಭ್ರಮ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕುಷ್ಟಗಿ : 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶುಕ್ರವಾರ ಬೆಳಿಗ್ಗೆ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲೆಡೆ ಯೋಗಾಸನಗಳನ್ನು ಮಾಡುವ ಮೂಲಕ ಸಂಭ್ರಮದಿಂದ ಯೋಗ ದಿನ ಆಚರಿಸಲಾಯಿತು.

ನ್ಯಾಯಾಲಯ, ವಿವಿಧ ಸರ್ಕಾರಿ ಕಚೇರಿ, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ವಿವಿಧೆಡೆ ಹಲವು ಗಣ್ಯರು ವಿವಿಧ ಭಂಗಿಗಳಲ್ಲಿ ಯೋಗ ಮಾಡಿ ಸದಾ ಚೆಟುವಟಿಕೆ, ಲವಲವಿಕೆ, ಆರೋಗ್ಯದಿಂದಿರಲು ಯೋಗ ಉತ್ತಮ ಮಾರ್ಗವಾಗಿದೆ ಎಂದು ಜಾಗೃತಿ ಮೂಡಿಸಿದರು.

ಇತ್ತ ವಿಧಾನಸಭಾ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ಅವರು ತಮ್ಮ ಸ್ವಗ್ರಾಮವಾದ ತಾಲೂಕಿನ ಕೊರಡಕೇರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳೊಂದಿಗೆ ಯೋಗ ಮಾಡುವ ಮುಖಾಂತರ
ಅಂತರಾಷ್ಟ್ರೀಯ ಯೋಗ ದಿನ ಆಚರಿಸಿ ಗಮನ ಸೆಳೆದರು. ಈ ವೇಳೆ ಶಾಲಾ ಶಿಕ್ಷಕರ ವರ್ಗ ಮತ್ತು ಶಾಲಾ ಸುಧಾರಣ ಸಮೀತಿಯ ಅಧ್ಯಕ್ಷರು, ಸದಸ್ಯರು ಗ್ರಾಮದ ಗುರು ಹಿರಿಯರು ಪಾಲ್ಗೊಂಡಿದ್ದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ತಾಲೂಕು ನ್ಯಾಯವಾದಿಗಳ ಸಂಘ ಹಾಗೂ ತಾಲೂಕು ಕಾನೂನು ಅರಿವು ನೆರವು ಸಮಿತಿ ಸಹಯೋಗದಲ್ಲಿ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳು ಹಾಗೂ ನ್ಯಾಯಾಂಗ ಇಲಾಖೆ ಸಿಬ್ಬಂದಿ ನ್ಯಾಯಾಲಯ ಆವಯರಣದಲ್ಲಿ ಸಾಮೂಹಿಕವಾಗಿ ಯೋಗ ಮಾಡುವ ಮುಖಾಂತರ ಯೋಗ ದಿನ ಆಚರಿಸಿದರು.

ಅದೇರೀತಿ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಹಾವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಯೋಗಪಟುಗಳು ಹಾಗೂ ಉಪನ್ಯಾಸಕರೊಂದಿಗೆ ವಿವಿಧ ಭಂಗಿಗಳಲ್ಲಿ ಯೋಗ ಮಾಡಿ ಅಂತರಾಷ್ಟ್ರೀಯ ಯೋಗ ದಿನ ಆಚರಿಸಿದರು. ಪತಂಜಲಿ ಯೋಗ ಸಮಿತಿ ಪ್ರಮುಖ ಯೋಗ ಪಟು ವೀರೇಶ ಬಂಗಾರಶೆಟ್ಟರ್ ಅವರು ವಿದ್ಯಾರ್ಥಿಗಳಿಗೆ ಯೋಗಾಸಗಳನ್ನು ಮಾಡಿಸಿ ಆರೋಗ್ಯ ಜಾಗೃತಿ ಮೂಡಿಸಿದರು.

ಈ ವೇಳೆ ಪ್ರಾಂಶುಪಾಲ ಡಾ.ಎಸ್. ವಿ‌. ಡಾಣಿ ಅವರು ಮಾತನಾಡಿ, ಯೋಗವು ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳ ಅವಿಭಾಜ್ಯ ಅಂಗವಾಗಿದೆ. ಅದು ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖವಿದೆ. ಈಗ ವಿಶ್ವಾದ್ಯಂತ ಗುರುತಿಸಿಕೊಂಡಿದ್ದು, ಯೋಗದ ಗುರುವಾಗಿ ಭಾರತದ ಸ್ಥಾನವನ್ನು ಗಟ್ಟಿಗೊಳಿಸಿದೆ, ಯೋಗವು ದೇಹ, ಮನಸ್ಸು ಮತ್ತು ಭಾವನೆಗಳನ್ನು ಸಮತೋಲನಗೊಳಿಸುವ ಸಮಗ್ರ ಅಭ್ಯಾಸವಾಗಿದೆ. ಪ್ರತಿಯೊಬ್ಬರೂ ಯೋಗ ಪದ್ಧತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಅದೇರೀತಿ ಇಲ್ಲಿಯ ಗವಿಸಿದ್ದೇಶ್ವರ ಪ್ರೌಢಶಾಲೆಯಲ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಪತಂಜಲಿ ಯೋಗ ಸಮಿತಿ ಯೋಗ ಪಟುಗಳು ಯೋಗಾಸನಗಳನ್ನು ಮಾಡಿಸುವ ಮುಖಾಂತರ ಯೋಗ ದಿನ ಆಚರಿಸಿದರು. ಈ ವೇಳೆ ಮುಖ್ಯಶಿಕ್ಷಕರು, ಸಹ ಶಿಕ್ಷಕರರು ಪಾಲ್ಗೊಂಡಿದ್ದರು.

ಇಲ್ಲಿಯ ಶ್ರೀ ಬುತ್ತಿಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ತಾಲೂಕು ಪತಂಜಲಿ ಯೋಗ ಸಮಿತಿ ವತಿಯಿಂದ ಆಯೋಜಿಸಿದ್ದ ಹತ್ತು ದಿನಗಳ ಯೋಗ ತರಬೇತಿ ಶಿಬಿರ ಮುಕ್ತಾಯ ಸಮಾರಂಭದಲ್ಲಿ ಹಿರಿಯ ನಾಗರಿಕರಾದ ನಿವೃತ್ತ ಶಿಕ್ಷಕ ಶರಣಪ್ಪ ಜಿಗೇರಿ ಅವರನ್ನು ಹಾಗೂ ಉರಗ ರಕ್ಷಕ ಮೌಲಾಸಾಬ ಅವರನ್ನು ಸನ್ಮಾನಿಸಲಾಯಿತು.

ಬಳಿಕ ಹಿರಿಯ ಸಾಧಕ ಯೋಗ ಗುರು ಸಿದ್ದಪ್ಪ ಕಾತರಕಿ, ಭರತೇಶ ಜೋಷಿ ಯೋಗ ಕುರಿತು ಉಪನ್ಯಾಸ ನೀಡೀದರು.
ಈ ವೇಳೆ ಶಿಬಿರದಲ್ಲಿ ತರಬೇತಿ ಪಡೆದ ಸಾರ್ವಜನಿಕರು ಯೋಗಾಸನಗಳನ್ನು ಮಾಡುವ ಮುಖಾಂತರ ಅಂತರಾಷ್ಟ್ರೀಯ ಯೋಗ ದಿನ ಆಚರಿಸಿದರು. 

ತಾಲೂಕಿನ ಕಬ್ಬರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೀಳಗಿ ಗ್ರಾಮದ ಅಮೃತ ಸರೋವರ ಕೆರೆಯ ದಡದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ತಾಲೂಕು ಪಂಚಾಯಿತಿ ಇಒ ನಿಂಗಪ್ಪ ಮಸಳಿ ಚಾಲನೆ ನೀಡಿದರು.

ತಾ.ಪಂ. ಸಹಾಯಕ ನಿರ್ದೇಶಕ ನಿಂಗನಗೌಡ ವಿ. ಹಿರೇಹಾಳ, ತಾ ಪಂ ಸಿಬ್ಬಂದಿ ಬಸವರಾಜ್ ಕೆ, ಚಂದ್ರಶೇಖರ್ ಜಿ ಹಿರೇಮಠ್, ಬಸವರಾಜ್ ಟಿ, ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಶರಣಮ್ಮ ಕೆ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸರ್ವ ಸದಸ್ಯರು, ಶಿಕ್ಷಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಎಸ್,ಹೆಚ್,ಜಿ ಸದಸ್ಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಯೋಗಾಸನಗಳನ್ನು ಮಾಡುವ ಮುಖಾಂತರ ಯೋಗ ದಿನ ಸಂಭ್ರಮಕ್ಕೆ ಸಾಕ್ಷಿಯಾದರು.